ಅಸಿಯಾ ಮತ್ತು ಬುರ್ಹಾನಿ ಜೊತೆ ಸಂಪರ್ಕ ದೃಢಪಡಿಸಿದ ಹಫೀಸ್ ಸಯೀದ್

ಪ್ರತ್ಯೇಕತಾವಾದಿ ಮುಖಂಡ ಅಸಿಯಾ ಅಂದ್ರಾಬಿ ಜೊತೆ ಸಂಪರ್ಕ ಹೊಂದಿದ್ದು ಮಾತ್ರವಲ್ಲದೆ ಇತ್ತೀಚೆಗೆ ಹತ್ಯೆಗೀಡಾದ...
ಜಮಾತ್ -ಉದ್-ದವಾಹ್ ಮುಖ್ಯಸ್ಥ ಹಫೀಸ್ ಸಯೀದ್
ಜಮಾತ್ -ಉದ್-ದವಾಹ್ ಮುಖ್ಯಸ್ಥ ಹಫೀಸ್ ಸಯೀದ್
Updated on: 
ಇಸ್ಲಾಮಾಬಾದ್: ಪ್ರತ್ಯೇಕತಾವಾದಿ ಮುಖಂಡ ಅಸಿಯಾ ಅಂದ್ರಾಬಿ ಜೊತೆ ಸಂಪರ್ಕ ಹೊಂದಿದ್ದು ಮಾತ್ರವಲ್ಲದೆ ಇತ್ತೀಚೆಗೆ ಹತ್ಯೆಗೀಡಾದ ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಜೊತೆ ಕೂಡ ಸಂಪರ್ಕ ಹೊಂದಿದ್ದಾಗಿ ಜಮಾತ್ -ಉದ್-ದವಾಹ್ ಮುಖ್ಯಸ್ಥ ಹಫೀಸ್ ಸಯೀದ್ ದೃಢಪಡಿಸಿದ್ದಾನೆ.
ಎಎನ್ಐ ಸುದ್ದಿಸಂಸ್ಥೆ ಬಿಡುಗಡೆ ಮಾಡಿದ ವಿಶೇಷ ವಿಡಿಯೋದಲ್ಲಿ, ಅಂದ್ರಾಬಿ ತನ್ನ ಸೋದರಿ ಎಂದು 2008ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹೇಳಿರುವುದು ದಾಖಲಾಗಿದೆ. ಅಂದ್ರಾಬಿ ಡಕ್ತರನ್-ಇ-ಮಿಲ್ಲತ್ ಮುಖ್ಯಸ್ಥೆಯಾಗಿದ್ದಾಳೆ.
ಡಕ್ತರನ್-ಇ-ಮಿಲ್ಲತ್ ಕ್ರಾಂತಿಕಾರಿ ಮಹಿಳಾ ಸಂಘಟನೆಯಾಗಿದೆ. ಅದರ ನೇತೃತ್ವವನ್ನು ಅಸಿಯಾ ಅಂದ್ರಾಬಿ ವಹಿಸಿದ್ದಾಳೆ. ಸಂಘಟನೆ ಪ್ರತಿವರ್ಷ ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ.
ಈ ವಿವಾದಾತ್ಮಕ ವಿಡಿಯೋದಲ್ಲಿ, ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಯೀದ್, ಸಾಯುವುದಕ್ಕೆ ಕೆಲ ದಿನಗಳ ಮೊದಲು ಬುರ್ಹಾನ್ ವಾನಿ ನನಗೆ ಕರೆ ಮಾಡಿ ನಿನ್ನ ಜೊತೆ ಮಾತನಾಡುವುದು ನನ್ನ ಕೊನೆ ಆಸೆ. ಅದು ಈಗ ಈಡೇರಿದೆ. ಇನ್ನು ನಾನು ಸಾಯಲು ಸಿದ್ದ ಎಂದು ಹೇಳಿದ್ದ ಎಂದು ಬಹಿರಂಗಪಡಿಸಿದ್ದಾನೆ.
ಕಾಶ್ಮೀರ ಸಮಸ್ಯೆಗಳಿಗೆ ಹುರಿಯತ್ ನಾಯಕ ಸೈಯದ್ ಆಲಿ ಗಿಲಾನಿಯ 4 ಅಂಶಗಳನ್ನು ಸ್ವೀಕರಿಸುವಂತೆ ಇಲ್ಲದಿದ್ದರೆ ಯುದ್ಧಕ್ಕೆ ಸನ್ನದ್ಧವಾಗುವಂತೆ ಸೈಯದ್ ಭಾರತದ ನಾಯಕರಿಗೆ ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾನೆ.
ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಕೊಂದು ಹಾಕಿದ ನಂತರ ಕಾಶ್ಮೀರದಲ್ಲಿ ಆರಂಭಗೊಂಡ ಹಿಂಸಾಚಾರ ಇನ್ನೂ ನಿಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com