ಇಸೀಸ್ ನೊಂದಿಗೆ ನಂಟು ಶಂಕೆ: ಜಾಕಿರ್ ನಾಯಕ್ ಆಪ್ತನ ಬಂಧನ

ಜಾಕಿರ್ ನಾಯಕ್ ನ ಆಪ್ತನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಜಾಕಿರ್ ನಾಯಕ್
ಜಾಕಿರ್ ನಾಯಕ್

ಮುಂಬೈ: ಉಗ್ರರ ಸ್ಫೂರ್ತಿ, ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಆತನ ಆಪ್ತನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಜಾಕಿರ್ ನಾಯ್ಕ್ ನ ಇಸ್ಲಾಮಿಕ್ ಸಂಶೋಧನಾ ಫೌಂಡೇಶನ್ ನೊಂದಿಗೆ ಗುರುತಿಸಿಕೊಂಡಿರುವ ಯುವಕ ಅರ್ಷಿದ್ ಖುರೇಷಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿರುವುದನ್ನು ಸುದ್ದಿ ಸಂಸ್ಥೆ ಎಎನ್ಐ ಸ್ಪಷ್ಟಪಡಿಸಿದೆ.

ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ಅರ್ಷಿದ್ ಖುರೇಷಿಯನ್ನು ಬಂಧಿಸಲಾಗಿದ್ದು, ಕೇರಳದಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ದ್ವೇಷ ಹರಡುವುದು ಸೇರಿದಂತೆ ಸೆಕ್ಷನ್ 153 ಎ, 34 ಐಪಿಸಿ ಹಾಗೂ ಯುಎಪಿಎ 13 ಅಡಿಯಲ್ಲಿ ಅರ್ಷಿದ್ ಖುರೇಷಿಯನ್ನು ಬಂಧಿಸಲಾಗಿದೆ. ಅರ್ಷಿದ್ ಖುರೇಷಿಯ ಭಯೋತ್ಪಾದನೆಯೊಂದಿಗಿನ ನಂಟು ಸಾಬೀತಾದರೆ ಜಾಕಿರ್ ನಾಯಕ್ ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಿಂದ ಭಯೋತ್ಪಾದನೆಯೊಂದಿಗಿನ ನಂಟು ಆರೋಪದಡಿ ಬಂಧನಕ್ಕೊಳಗಾದ ಮೊದಲ ವ್ಯಕ್ತಿ ಈತನಾಗಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com