ತಿಂಗಳ ಮೊದಲೇ ಇಂದಿರಾ ಹತ್ಯೆ ಕುರಿತು ಸುಳಿವು ನೀಡಿದ್ದ ಖಾಲಿಸ್ತಾನ ಪರ ಮುಖಂಡ!

ದಿವಂಗತ ಪ್ರಧಾನಿ ಇಂದಿರಾಗಾಂಧಿ ಹತ್ಯೆಗೀಡಾಗುವ ತಿಂಗಳ ಮೊದಲೇ ಖಾಲಿಸ್ತಾನ ಮುಖಂಡನೋರ್ವ ಅವರ ಸಾವಿನ ಕುರಿತು ಸುಳಿವು ನೀಡಿದ್ದ ಎಂಬ ಆಘಾತಕಾರಿ ಸುದ್ದಿ ಬ್ರಿಟನ್ ನ ದಾಖಲೆಗಳಿಂದ ಬಹಿರಂಗವಾಗಿದೆ.
ಇಂದಿರಾಗಾಂಧಿ ಮತ್ತು ಡಾ.ಜಗ್ಜೀತ್ ಸಿಂಗ್ (ಸಂಗ್ರಹ ಚಿತ್ರ)
ಇಂದಿರಾಗಾಂಧಿ ಮತ್ತು ಡಾ.ಜಗ್ಜೀತ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ದಿವಂಗತ ಪ್ರಧಾನಿ ಇಂದಿರಾಗಾಂಧಿ ಹತ್ಯೆಗೀಡಾಗುವ ತಿಂಗಳ ಮೊದಲೇ ಖಾಲಿಸ್ತಾನ ಮುಖಂಡನೋರ್ವ ಅವರ ಸಾವಿನ ಕುರಿತು ಸುಳಿವು ನೀಡಿದ್ದ ಎಂಬ ಆಘಾತಕಾರಿ ಸುದ್ದಿ  ಬ್ರಿಟನ್ ನ ದಾಖಲೆಗಳಿಂದ ಬಹಿರಂಗವಾಗಿದೆ.

ಪ್ರಸ್ತುತ ಪಂಜಾಬ್ ಪ್ರಾಂತ್ಯವನ್ನು ಭಾರತದಿಂದ ಬೇರ್ಪಡಿಸಿ ಖಲಿಸ್ತಾನ ಎಂದು ನಾಮಕರಣ ಮಾಡಿ ಸ್ವತಂತ್ರ ದೇಶ ಎಂದು ಘೋಷಿಸಬೇಕು ಎಂದು ಹೋರಾಟ ನಡೆಸುತ್ತಿದ್ದ ಖಾಲಿಸ್ತಾನ ಪರ  ಮುಖಂಡ ಡಾ.ಜಗ್ಜೀತ್ ಸಿಂಗ್ ಚೌಹ್ವಾಣ್ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಗುತ್ತದೆ ಎಂದು ತಿಂಗಳ ಮೊದಲೇ ಊಹಿಸಿದ್ದರಂತೆ. ಈ ಆಘಾತಕಾರಿ ಮಾಹಿತಿ ಬ್ರಿಟನ್ ಸರ್ಕಾರದ ದಾಖಲೆಗಳಿಂದ ಲಭ್ಯವಾಗಿದ್ದು, ಮತ್ತೊಂದು ಪ್ರಮುಖ ಅಂಶವೆಂದರೆ ಪಂಜಾಬ್ ಅನ್ನು ಭಾರತದಿಂದ ಬ್ರೇಪಡಿಸಿ ಪ್ರತ್ಯೇಕ ಸ್ವತಂತ್ರ್ಯ ದೇಶ ಸ್ಥಾನ ಮಾನ ನೀಡಲು ಅಂದಿನ  ಬ್ರಿಟನ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಸರ್ಕಾರ ಬೆಂಬಲ ನೀಡಿತ್ತು ಎಂಬ ಅಂಶಕೂಡ ಬಹಿರಂಗವಾಗಿದೆ.

1984ರ ಜೂನ್ ತಿಂಗಳಲ್ಲಿ ಜಗ್ಜೀತ್ ಸಿಂಗ್ ಇಂದಿರಾ ಗಾಂಧಿ ಹತ್ಯೆ ಕುರಿತಂತೆ ಸುಳಿವು ನೀಡಿದ್ದಷ್ಟೇ ಅಲ್ಲದೇ ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಳ್ಳುವ ಕುರಿತು ಮಾತನಾಡುತ್ತಿದ್ದರು ಎಂದು ಬ್ರಿಟನ್ ನ ಗೃಹ ಮತ್ತು ವಿದೇಶಾಂಗ ಇಲಾಖೆಯ ದಾಖಲೆಗಳಿಂದ ತಿಳಿದುಬಂದಿದೆ. ಇನ್ನು ಖಾಲಿಸ್ತಾನ ಪರ ಮುಖಂಡ ಜಗ್ಜೀತ್ ಸಿಂಗ್ ಬ್ರಿಟನ್ ನಲ್ಲಿ ಆಶ್ರಯ ಪಡೆದಿರುವುದರ ಕುರಿತು  ಅಂದೇ ಭಾರತ ಸರ್ಕಾರ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಜಗ್ಜೀತ್ ಸಿಂಗ್ ಬ್ರಿಟನ್ ಆಶ್ರಯ ನೀಡಿರುವುದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಅಡ್ಡಿಯಾಗಲಿದೆ ಎಂದು  ಭಾರತ ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೂ ಭಾರತದ ಎಚ್ಚರಿಕೆಯನ್ನು ಬ್ರಿಟನ್ ಸರ್ಕಾರ ನಿರ್ಲಕ್ಷಿಸಿತ್ತು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com