ಶ್ರೀನಗರ: ಕಾಶ್ಮೀರದಲ್ಲಿನ ಅಸ್ಥಿರತೆ ಮುಂದುವರಿದಿದೆ. ಪ್ರತಿಭಟನೆಯಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರ 46ಕ್ಕೇರಿದೆ.
ಇಂದು ಅಪರಾಹ್ನ ನಡೆದ ದಾಳಿಯಲ್ಲಿ ದಕ್ಷಿಣ ಕಾಶ್ಮೀರದ ಚರ್ಸೂ ಅವಂತಿಪೋರಾದಲ್ಲಿ ಮುಶ್ತಾಕ್ ಅಹ್ಮದ್ ಎಂಬ ಯುವಕ ಬಲಿಯಾಗಿದ್ದಾನೆ.
ಇನ್ನೊಂದೆಡೆ ದಕ್ಷಿಣ ಕಾಶ್ಮೀರದ ಪಲ್ವಾಮಾ ಜಿಲ್ಲೆಯ ಕಕಪೊರಾದಲ್ಲಿ ನಡೆದ ಗಲಭೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ವಿಶೇಷ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕರೆದೊಯ್ಯಲಾಗಿದೆ.
ಹಿಂಸಾಪೀಡಿತ ಜಿಲ್ಲೆಗಳಿಗೆ ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಪರಿಸ್ಥಿಯನ್ನು ಅವಲೋಕಿಸಲಿದ್ದಾರೆ.