ಜಾಕಿರ್ ನಾಯಕ್ ಬಂಧಿತ ಸಹವರ್ತಿಗಳಿಂದ ಇಸ್ಲಾಂಗೆ 800 ಯುವಕರ ಮತಾಂತರ

ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯಕ್ ಸಹವರ್ತಿಗಳಾದ ರಿಜ್ವಾನ್ ಖಾನ್, ಆರ್ಷಿದ್ ಖುರೇಷಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದ್ದು, ಬಂಧಿತರು...
ಮುಸ್ಲಿಂ
ಮುಸ್ಲಿಂ
Updated on

ಮುಂಬೈ: ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯಕ್ ಸಹವರ್ತಿಗಳಾದ ರಿಜ್ವಾನ್ ಖಾನ್, ಆರ್ಷಿದ್ ಖುರೇಷಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದ್ದು, ಬಂಧಿತರು ದೇಶಾದ್ಯಂತ 800 ಯುವಕರನ್ನು ಇಸ್ಲಾಂಗೆ ಮತಾಂತರಿಸಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಹಿರಂಗ ಪಡಿಸಿದೆ.

ಬಂಧಿತರಿಂದ ವಶಕ್ಕೆ ಪಡೆದ ದಾಖಲೆಗಳು ಹಾಗೂ ಆರೋಪಿಗಳ ವಿಚಾರಣೆ ಬಳಿಕ ಎಟಿಎಸ್ ಈ ಆಘಾತಕಾರಿ ವಿಷಯವನ್ನು ಬಯಲು ಮಾಡಿದ್ದು, ಆರೋಪಿಗಳು ಮುಂಬೈ ಸೇರಿದಂತೆ ದೇಶಾದ್ಯಂತ ಹಿಂದು-ಕ್ರೈಸ್ತ ಯುವಕರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದರು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಹಣದ ಆಮಿಷ ಹಾಗೂ ಕೈದಿಗಳಿಗೆ ಕಾನೂನು ನೆರವು ನೀಡಿ ಅವರನ್ನು ಇಸ್ಲಾಂನತ್ತ ಸೆಳೆಯುತ್ತಿದ್ದರು ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಕೇರಳದಿಂದ ನಾಪತ್ತೆ ಆಗಿ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಸೇರಿದ್ದಾರೆ ಎನ್ನಲಾದ 21 ಜನರ ಜತೆ ಇವರು ಸಂಪರ್ಕದಲ್ಲಿದ್ದರೇ ಎಂಬುದರ ಬಗ್ಗೆ ಎಟಿಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com