ನನ್ನ ತಂದೆಗೆ ಪೊಲೀಸ್ ಅಧಿಕಾರಿಣಿ ಸೇರಿ 140 ಮಹಿಳೆಯರೊಂದಿಗೆ ಸಂಬಂಧ

ಇತನ ಕಾಮತೃಷೆಗೆ ಮಿತಿಗಳೆ ಇಲ್ಲ ಅಂತ ಕಾಣಿಸುತ್ತೆ. ಹೌದು ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 140 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ...
ಅಕ್ರಮ ಸಂಬಂಧ
ಅಕ್ರಮ ಸಂಬಂಧ
Updated on

ಬರೇಲಿ: ಇತನ ಕಾಮತೃಷೆಗೆ ಮಿತಿಗಳೆ ಇಲ್ಲ ಅಂತ ಕಾಣಿಸುತ್ತೆ. ಹೌದು ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 140 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಆಗಂತ ಸ್ವತಃ ಆತನ ಮಗಳೇ ಹೇಳಿದ್ದಾಳೆ.

ಕ್ರೈಂ ಬ್ರಾಂಚ್ ಕ್ರಿಮಿನಲ್ ತನಿಖಾ ತಂಡದಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ತಂದೆ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ 140 ಮಹಿಳೆಯರ ಜತೆ ಸಂಬಂಧ ಹೊಂದಿದ್ದಾರೆ. ಈ ವಿವರಗಳನ್ನು ತನ್ನ ತಂದೆ ತಮ್ಮ ರಹಸ್ಯ ಡೈರಿಯೊಂದರಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ನನ್ನ ಮಲತಂದೆ ತನ್ನ ಸಹೋದರ ಹಾಗೂ ತಾಯಿಯನ್ನು ಹತ್ಯೆ ಮಾಡಿದ್ದಾರೆ ಎಂದು ಮಗಳು ಕೋರ್ಟ್ ಗೆ ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆಗಸ್ಟ್ 6 ವರದಿ ನೀಡುವಂತೆ ಕಿಲಾ ಪೊಲೀಸ್ ಠಾಣೆಯ ಪೊಲೀಸರಿಗೆ ಆದೇಶಿಸಿದೆ.

2010ರಲ್ಲಿ ತಂದೆಯ ಅಕ್ರಮ ಸಂಬಂಧದ ಕುರಿತು ಮಗ ವಿರೋಧಿಸಿದಾಗ ಆತನನ್ನು ಕುತ್ತಿಗೆ ಹಿಸುಕಿ ಕೊಂದಿದ್ದರು. ಗಂಡನ ನೀಚ ಕೃತ್ಯಗಳನ್ನು ವಿರೋಧಿಸಿದ ಪತ್ನಿಗೂ ಕಳೆದ ವರ್ಷ ಫೆಬ್ರವರಿಯಲ್ಲಿ ಸ್ವಲ್ಪ ವಿಷ ನೀಡಿ ಆಕೆಯನ್ನು ಮೆಟ್ಟಿಲಿನಿಂದ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಮಲಪುತ್ರಿ ಆರೋಪಿಸಿದ್ದಾಳೆ.

ಈ ಪ್ರಕರಣ ಸಂಬಂಧ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಪುತ್ರಿ, ನನ್ನ ತಾಯಿ ತೀರಿಕೊಂಡ ನಂತರ ನಾನು ಕಳೆದ ವರ್ಷ ಜೂನ್ ತಿಂಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಹಳೆಯ ಡೈರಿಗಳು ಸಿಕ್ಕವು. ಅದನ್ನು ಬಿಡಿಸಿ ಓದಿದ ನಂತರ ನನಗೆ ಶಾಕ್ ಹೊಡೆದಂತಾ ಪರಿಸ್ಥಿತಿ. ಏಕೆಂದರೆ ನನ್ನ ಮಲ ತಂದೆ ಸುಮಾರು 140 ಮಹಿಳೆಯರ ಜತೆ ಸಂಬಂಧವಿಟ್ಟುಕೊಂಡಿದ್ದ ಸಂಪೂರ್ಣ ವಿವರಗಳು ಆ ಡೈರಿಯಲ್ಲಿ ಬರೆಯಲಾಗಿತ್ತು.

ಈ ಸಂಬಂಧ ತಂದೆಯನ್ನು ಪ್ರಶ್ನಿಸಿದಾಗ ಆತ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೇ ನನ್ನನ್ನು ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದರು. ಇದರಿಂದ ನಾನು ಸುಮ್ಮನಾದೆ. ಕೆಲ ದಿನಗಳ ಬಳಿಕ ನನ್ನ ಕೋಣೆಗೆ ನುಗಿದ್ದ ನನ್ನ ಮಲತಂದೆ ಗನ್ ತೋರಿಸಿ ನನ್ನನ್ನು ಮೇಲೆ ಅತ್ಯಾಚಾರ ಮಾಡಿದರು. ಅಲ್ಲಿಂದ ಇದು ನಿರಂತರವಾಗಿ ನಡೆಯಿತು. ದೈಹಿಕ ಹಾಗೂ ಮಾನಸಿಕವಾಗಿ ನೊಂದು ಕೊನೆಗೆ ದೂರು ಕೊಡಲು ಮುಂದಾದೆ ಆದರೆ ಯಾರು ದೂರನ್ನು ನಮೂದಿಸಲು ಪೊಲೀಸರು ಹಿಂಜರಿದರು. ನಂತರ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ದೂರು ನೀಡಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com