ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿರುವ ಕೇಂದ್ರ ಸರ್ಕಾರ, ಮಂಗಳವಾರ ಏಳನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿದೆ.
ಪರಿಷ್ಕೃತ ವೇತನ ಮುಂದಿನ ಆಗಸ್ಟ್ ತಿಂಗಳನಿಂದಲೇ ಜಾರಿ ಬರುತ್ತಿದ್ದು, ಸುಮಾರು 10 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು 2.57 ಟೈಮ್ಸ್ ನಷ್ಟು ಹೆಚ್ಚಳ ಮಾಡಲಾಗಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಜನವರಿ 1, 2016ರಿಂದಲೇ ಪೂರ್ವಾನ್ವಯವಾಗುಂತೆ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸಿನಂತೆ ಮೂಲ ವೇತನ ಕನಿಷ್ಠ 18 ಸಾವಿರದಿಂದ ಗರಿಷ್ಠ 2.5ಲಕ್ಷದವರೆಗೆ ವೇತನ ಪಡೆಯಲಿದ್ದಾರೆ. ಇದರಿಂದ ಸರ್ಕಾರಕ್ಕೆ ಅಂದಾಜು 1.02 ಲಕ್ಷ ಕೋಟಿ ರುಪಾಯಿ ಹೊರೆಯಾಗಲಿದೆ.