"ಚಿಗರೆ ಮೇಲೆ ಸಲ್ಮಾನ್ ಖಾನ್ ಗುಂಡು ಹಾರಿಸಿದ್ದನ್ನು ನಾನು ನೋಡಿದ್ದೆ"!

ತೀವ್ರ ಕುತೂಹಲ ಕೆರಳಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಹೊಸ ತಿರುವುದೊರೆತಿದ್ದು, ಸಲ್ಮಾನ್ ಖಾನ್ ಚಿಗರೆಗೆ ಗುಂಡು ಹಾರಿಸಿದ್ದನ್ನು ನಾನು ನೋಡಿದ್ದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಹರೀಶ್ ದುಲಾನಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಜೀಪ್ ಚಾಲಕ ದುಲಾನಿ (ಸಂಗ್ರಹ ಚಿತ್ರ)
ಸಲ್ಮಾನ್ ಖಾನ್ ಹಾಗೂ ಜೀಪ್ ಚಾಲಕ ದುಲಾನಿ (ಸಂಗ್ರಹ ಚಿತ್ರ)

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಸಲ್ಮಾನ್ ಖಾನ್ ಚಿಗರೆಗೆ ಗುಂಡು  ಹಾರಿಸಿದ್ದನ್ನು ನಾನು ನೋಡಿದ್ದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಹರೀಶ್ ದುಲಾನಿ ಹೇಳಿದ್ದಾರೆ.

ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಹರೀಶ್ ದುಲಾನಿ, 1998ರಲ್ಲಿ ನಡೆದಿದ್ದ ಈ ಘಟನೆ ವೇಳೆ ತಾವು ಸಲ್ಮಾನ್ ಖಾನ್ ಅವರ ಜೀಪ್ ನ ಚಾಲಕರಾಗಿದ್ದೆವು.  ಆಗ  ಸ್ವತಃ ಸಲ್ಮಾನ್ ಖಾನ್ ಜೀಪ್ ಚಾಲನೆ ಮಾಡುತ್ತಲೇ ಚಿಗರೆ ಮೇಲೆ ಗುಂಡು ಹಾರಿಸಿದ್ದರು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜಸ್ತಾನದ ಜೋಧ್ ಪುರ ನ್ಯಾಯಾಲಯ ಕೃಷ್ಣ ಮೃಗ ಭೇಟೆ ಪ್ರಕರಣ ಒಂದು ಪ್ರಕರಣ ಅಂದರೆ ಕೃಷ್ಣ ಮೃಗ ಬೇಟೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆ  (ಪರವಾನಗಿ ಅವಧಿ  ಮುಗಿದ ನಂತರವೂ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಹಾಗೂ ಬಳಸುವುದು) ಸಲ್ಮಾನ್ ಖಾನ್ ಅವರನ್ನು ಖುಲಾಸೆಗೊಳಿಸಿತ್ತು. ಇದರ ಬೆನ್ನಲ್ಲೇ ಅಂದು ಜಿಪ್ಸಿ ಚಾಲಕರಾಗಿದ್ದ ಹರೀಶ್ ದುಲಾನಿ  ಅವರನ್ನು ಖಾಸಗಿ ಸುದ್ದಿವಾಹಿನಿಯ ವರದಿಗಾರ್ತಿಯೊಬ್ಬರು ಭೇಟಿ ಸಂದರ್ಶನ ಪಡೆದಿದ್ದಾರೆ.

ಸಂದರ್ಶನದಲ್ಲಿ ಚಾಲಕ ಹರೀಶ್ ದುಲಾನಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ತಮಗೆ ಜೀವ ಬೆದರಿಕೆ ಇದೆ. ಇದೇ ಕಾರಣಕ್ಕಾಗಿ ತಾವು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದೇ  ತಲೆಮರೆಸಿಕೊಂಡಿದ್ದೆ. ಆದರೆ ನ್ಯಾಯಾಲಯ ಹೇಳಿರುವಂತೆ ನಾನು ಉದ್ದೇಶ ಪೂರ್ವಕವಾಗಿ ತಲೆಮರೆಸಿಕೊಂಡಿಲ್ಲ. ಈಗಲೂ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು,   ನ್ಯಾಯಾಲಯ ಮತ್ತು ಪೊಲೀಸರು ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ಒದಗಿಸುವುದಾದರೆ ನ್ಯಾಯಾಲಯಕ್ಕೆ ಬಂದು ತಾವು ನಡೆದ ಘಟನೆಯನ್ನು ವಿವರಿಸುವುದಾಗಿ ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ದುಲಾನಿಯನ್ನು ಜೀಪ್ ಮಾಲೀಕ ಕೆಲಸದಿಂದ ತೆಗೆದು ಹಾಕಿದ್ದರಂತೆ. ಬಳಿಕ ದುಲಾನಿ ವಿವಿಧ ಕೆಲಸ ಮಾಡುತ್ತಿದ್ದರಾದರೂ, ಅಲ್ಲೂ ಅವರಿಗೆ ಕೆಲ ದುಷ್ಕರ್ಮಿಗಳು  ಜೀವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಹೆಸರು ಬದಲಿಸಿಕೊಂಡು ಹಾಗೂ ಜಾಗ ಬದಲಿಸಿಕೊಂಡು ಜೀವನ ನಡೆಸುತ್ತಿದ್ದರಂತೆ. ಅಲ್ಲದೆ ತಮ್ಮನ್ನು ಯಾರಾದರೂ ಗುರುತು ಹಿಡಿಯುತ್ತಾರೆ ಎಂಬ  ಭಯದಿಂದ ಹಲವು ಬಾರಿ ತಮ್ಮ ವೇಶ-ಭೂಷಣಗಳನ್ನು ಬದಲಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ನಿದರ್ಶನಗಳು ಕೂಡ ಇದೆ ಎಂದು ದುಲಾನಿ ಹೇಳಿಕೊಂಡಿದ್ದಾರೆ.

1998ರಲ್ಲಿ ಹಮ್  ಸಾಥ್ ಸಾಥ್  ಹೈ ಸಿನಿಮಾ ಶೂಟಿಂಗ್​ ವೇಳೆ  ಜೋಧ್‍ಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್​ ಕೃಷ್ಣಮೃಗ ಬೇಟೆಯಾಡಿದ್ದರು. ರಕ್ಷಿತ ಅರಣ್ಯ  ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್​ ಖಾನ್​ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಪ್ರಕರಣದಲ್ಲಿ ಸಲ್ಮಾನ್ ಖಾನ್ 2006  ರ ಏಪ್ರಿಲ್ ಮತ್ತು 2007ರ ಆಗಸ್ಟ್​​ನಲ್ಲಿ ಜೈಲುವಾಸ ಅನುಭವಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com