ಪ್ರಯಾಣಿಕನ ಅಸಭ್ಯ ವರ್ತನೆ: ಮುಂಬೈ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಇಂಡಿಗೋ ವಿಮಾನ

ದುಬೈಯಿಂದ ಕೋಜ್ಹಿಕ್ಕೋಡ್ ಗೆ ಹೋಗುತ್ತಿದ್ದ ವಿಮಾನಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ಜೊತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ದುಬೈಯಿಂದ ಕೋಜ್ಹಿಕ್ಕೋಡ್ ಗೆ ಹೋಗುತ್ತಿದ್ದ ವಿಮಾನಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಮುಂಬೈ ನಿಲ್ದಾಣದಲ್ಲಿ ಇಂದು ತುರ್ತು ಭೂಸ್ಪರ್ಶ ಮಾಡಿತು.
ಈ ಕುರಿತು ಇಂಡಿಗೋ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಯಾಣಿಕ ಇತರರ ಜೊತೆ ಮತ್ತು ಸಿಬ್ಬಂದಿಯೊಂದಿಗೆ ಇದ್ದಕ್ಕಿದ್ದಂತೆ ಅಸಭ್ಯವಾಗಿ ವರ್ತಿಸತೊಡಗಿದ. ಆಹಾರ ತಿನ್ನಲು ಬಳಸುವ ಕಾರ್ಟ್ ಮೇಲೆ ಜಿಗಿದು ಮಾರಾಟದ ತಿನಿಸುಗಳ ಮೇಲೆ ಕುಳಿತ ಎಂದು ಹೇಳಿದೆ.
ವಿಮಾನದ ಸಿಬ್ಬಂದಿ ಆತನಿಗೆ ಕಾರ್ಟ್ ನಿಂದ ಕೆಳಗಿಳಿಯುವಂತೆ ಮನವಿ ಮಾಡಿಕೊಂಡರು. ಅದಕ್ಕೆ ಒಪ್ಪಿ ಕೆಳಗಿಳಿದ. ಕಾರ್ಟ್ ನಿಂದ ಕೆಳಗಿಳಿದ ತಕ್ಷಣ ಕೋಪಗೊಂಡು ಸಹ ಪ್ರಯಾಣಿಕರಿಗೆ ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದ ಕ್ಯಾಪ್ಟನ್ ಕೂಡಲೇ ವಿಮಾನ ಸಂಚಾರ ನಿಯಂತ್ರಣಕ್ಕೆ ಮತ್ತು ಭೂ ರಕ್ಷಣಾ ಸಿಬ್ಬಂದಿಗೆ ವಿಮಾನದಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.
ಇಂದು ಬೆಳಗ್ಗೆ 9.15ಕ್ಕೆ ವಿಮಾನ ಮುಂಬೈ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾದ ಕೂಡಲೇ ಅಸಭ್ಯ ವರ್ತನೆ ತೋರಿದ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಯ ವಶಕ್ಕೊಪ್ಪಿಸಿದರು. 
ನಂತರ ಎರಡು ಗಂಟೆ ತಡವಾಗಿ ವಿಮಾನ ಕೋಜ್ಹಿಕ್ಕೋಡಿಗೆ ಪ್ರಯಾಣ ಬೆಳೆಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com