ದೇಶದಲ್ಲಿ ಗೋಹತ್ಯೆ ನಿಷೇಧಕ್ಕೆ ಕೇಂದ್ರಕ್ಕೆ ಹಿಮಾಚಲಪ್ರದೇಶ ಹೈಕೋರ್ಟ್ 6 ತಿಂಗಳ ಗಡುವು

ದೇಶದಲ್ಲಿ ಆರು ತಿಂಗಳ ಒಳಗಾಗಿ ಗೋಹತ್ಯೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶಿಸಿದೆ.
ಗೋವು
ಗೋವು

ಶಿಮ್ಲಾ: ದೇಶದಲ್ಲಿ ಆರು ತಿಂಗಳ ಒಳಗಾಗಿ ಗೋಹತ್ಯೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶಿಸಿದೆ.

ಗೋಹತ್ಯೆ ನಿಷೇಧ ಜತೆಗೆ ದನ ಹಾಗೂ ಕರುವಿನ ಮಾಂಸದ ಆಮದು-ರಫ್ತು, ಗೋಮಾಂಸ ಉತ್ಪನ್ನಗಳನ್ನು ಕೂಡ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನ ನ್ಯಾಯಾಧೀಶರಾದ ರಾಜೀವ್ ಶರ್ಮಾ ಮತ್ತು ಸುರೇಶ್ವರ್ ಠಾಕೂರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಗೋಹತ್ಯೆ, ಗೋಮಾಂಸ ಮಾರಾಟ, ಗೋಮಾಂಸ ಉತ್ಪನ್ನ ಇತ್ಯಾದಿಗಳ ಮೇಲೆ ನಿಷೇಧ ಹೇರುವುದು ರಾಜ್ಯಗಳಿಗೆ ಅನ್ವಯಿಸಿದ್ದು ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಬಿನ್ನವಿಸಿಕೊಂಡಿತ್ತು. ಕೇಂದ್ರ ಸರ್ಕಾರದ ಅಸಹಾಯಕತೆಯನ್ನು ಹೈಕೋರ್ಟ್ ತಿರಸ್ಕರಿಸಿ ಇನ್ನು ಆರು ತಿಂಗಳೊಳಗಾಗಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆದೇಶಿಸಿದೆ.

ಗೋಹತ್ಯೆ, ಗೋಮಾಂಸ ಮಾರಾಟ, ಗೋಮಾಂಸ ಉತ್ಪನ್ನ ಇತ್ಯಾದಿಗಳ ಮೇಲೆ ನಿಷೇಧ ಹೇರುವಂತೆ 2015ರ ಅಕ್ಟೋಬರ್ 14ರಂದು ಈ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶವನ್ನೇ ಇದೀಗ ವಿಭಾಗೀಯ ಪೀಠ ಪುನರುಚ್ಚರಿಸಿದೆ.

ಭಾರತದಾದ್ಯಂತ ಗೋಹತ್ಯೆ ನಿಷೇಧಿಸಬೇಕು ಎಂದು ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷತ್ ಎಂಬ ಹಿಂದೂ ಸಂಘಟನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com