ಇಂಡೋನೇಷ್ಯಾ: ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ ಬಚಾವಾದ ಭಾರತೀಯ

ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಇಂಡೋನೇಷ್ಯಾದಲ್ಲಿ ಸಿಕ್ಕಿಬಿದ್ದಿದ್ದ ಭಾರತದ ಪಂಜಾಬ್ ಮೂಲದ ಗುರುದೀಪ್ ಸಿಂಗ್ ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ...
ಗುರುದೀಪ್ ಸಿಂಗ್
ಗುರುದೀಪ್ ಸಿಂಗ್

ನವದೆಹಲಿ: ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಇಂಡೋನೇಷ್ಯಾದಲ್ಲಿ ಸಿಕ್ಕಿಬಿದ್ದಿದ್ದ ಭಾರತದ ಪಂಜಾಬ್ ಮೂಲದ ಗುರುದೀಪ್ ಸಿಂಗ್ ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ ಪಾರಾಗಿದ್ದಾರೆ.

ಜಕಾರ್ತಾದ ಸಿಲಾಕಾಪ್ ದ್ವೀಪದಲ್ಲಿ ಶುಕ್ರವಾರ ಬೆಳಗ್ಗೆ ಗುರುದೀಪ್ ಸಿಂಗ್ ಸೇರಿದಂತೆ ಒಟ್ಟು 14 ಅಪರಾಧಿಗಳನ್ನು ಗುಂಡು ಹೊಡೆದು ಹತ್ಯೆಗೈಯಲು ನಿರ್ಧರಿಸಲಾಗಿತ್ತು. ಆದರೆ ಓರ್ವ ಇಂಡೋನೇಷ್ಯಾ ಹಾಗೂ 3 ನೈಜೀರಿಯಾ ಅಪಾಧಿಗಳಿಗಳನ್ನು ಮಾತ್ರ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಉಳಿದ 10 ಅಪರಾಧಿಗಳನ್ನು ಜೈಲಿನಲ್ಲೇ ಇಡಲಾಗಿದೆ.

ಗುರುದೀಪ್ ಸಿಂಗ್ ಮರಣದಂಡನೆಯಿಂದ ಪಾರಾಗಲು ಭಾರತದ ವಿದೇಶಾಂಗ ವ್ಯವಹಾಗಳ ಸಚಿವಾಲಯವೇ ಕಾರಣ. ಈ ಬಗ್ಗೆ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಗುರುದೀಪ್ ಗೆ ಮರಣದಂಡನೆ ಜಾರಿಗೊಳಿಸಿಲ್ಲ ಎಂದು ಇಂಡೋನೇಷ್ಯಾದಲ್ಲಿನ ಭಾರತೀಯ ರಾಯಭಾರಿಯಿಂದ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ 2005ರಲ್ಲಿ ಗುರುದೀಪ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈಗಾಗಲೇ ದಶಕಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದು, ಮರಣದಂಡನೆಯಿಂದ ವಿನಾಯಿತಿ ನೀಡಬೇಕು ಎಂದು ಮಾನವ ಹಕ್ಕು ಹೋರಾಟ ಸಂಘಟನೆಗಳು ಮನವಿ ಮಾಡಿಕೊಂಡಿದ್ದವು.

ಇನ್ನು ಗುರುದೀಪ್ ಸಿಂಗ್ ನ ಶಿಕ್ಷೆಯನ್ನು ಇಂಡೋನೇಷ್ಯಾ ರದ್ದುಪಡಿಸಿಲ್ಲ. ಮರಣದಂಡನೆ ಜಾರಿ ಬಗ್ಗೆ ಶೀಘ್ರ ಮರುನಿರ್ಧಾರ ಮಾಡಲಾಗುವುದು ಎಂದು ಅಲ್ಲಿನ ಅಟಾರ್ನಿ ಜನರಲ್ ಮುಹಮದ್ ಪ್ಯಾಸ್ಯೆಟೊ ಹೇಳಿದ್ದಾರೆ.

ಗುರುದೀಪ್ ಸಿಂಗ್ ಮರಣದಂಡನೆಯಿಂದ ಪಾರಾಗಿರುವ ಸುದ್ಧಿ ಕುಟುಂಬವರ್ಗದಲ್ಲಿ ಹರ್ಷ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com