ಪೊಲಿಸ್ ಆಯುಕ್ತರ ವರ್ಗಾವಣೆ ವರದಿ ತಳ್ಳಿಹಾಕಿದ ಹರ್ಯಾಣ ಸರ್ಕಾರ

ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿರುವ ವರದಿಗಳನ್ನು ಹರ್ಯಾಣ ಸರ್ಕಾರ ತಳ್ಳಿಹಾಕಿದೆ.
ಗುರುಗಾಂವ್ ನಲ್ಲಿ ಟ್ರಾಫಿಕ್ ಜಾಮ್ (ಸಂಗ್ರಹ ಚಿತ್ರ)
ಗುರುಗಾಂವ್ ನಲ್ಲಿ ಟ್ರಾಫಿಕ್ ಜಾಮ್ (ಸಂಗ್ರಹ ಚಿತ್ರ)

ಗುರಗಾಂವ್: ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣದಲ್ಲಿ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿರುವ ವರದಿಗಳನ್ನು ಹರ್ಯಾಣ ಸರ್ಕಾರ ತಳ್ಳಿಹಾಕಿದೆ.

ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿಲ್ಲ, ಗುರಗಾಂವ್ ಆಯುಕ್ತರಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲಿಸ್ ಇಲಾಖೆಯ ಡಿಜಿಪಿ ಕೆಪಿ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಗುರಗಾಂವ್-ದೆಹಲಿ-ಜೈಪುರ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ್ದ ಭಾರಿ ಟ್ರಾಫಿಕ್ ಜಾಮ್ ನಿರ್ವಹಣೆಯಲ್ಲಿ ಗುರಗಾಂವ್ ಪೊಲೀಸರು ವಿಫಲವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಆಯುಕ್ತ  ಸಿಪಿ ನವದೀಪ್ ವಿರ್ಕ್ ರನ್ನು ರೋಹ್ಟಕ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಗುರಗಾಂವ್ ನ ನೂತನ ಆಯುಕ್ತರನ್ನಾಗಿ ಸಂದೀಪ್ ಖಿರವಾರ್ ಅವರನ್ನು ನೇಮಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಗುರಗಾಂವ್ ನ ಡಿಪಿಆರ್ ಒ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪೊಲಿಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಗುರಗಾಂವ್ ನಲ್ಲಿ ಗುರುವಾರದಿಂದ ಸತತ ಮೂರು ದಿನ ಸುರಿದ ಭಾರಿ ಮಳೆಯಿಂದಾಗಿ ಗುರುಗ್ರಾಮದಲ್ಲಿ 15 -20ಕಿ.ಮೀ. ಉದ್ದದ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು,  ನೌಕರರು, ಪ್ರಮುಖವಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಟ್ರಾಫಿಕ್ ಜಾಮ್ ಹಾಗೂ ಗುರಗಾಂವ್ ಪೊಲೀಸರ ಲೋಪದಿಂದ ಕೂಡಿದ ನಿರ್ವಹಣೆ ಸಾಮಾಜಿಕ  ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com