ಸಾಂದರ್ಭಿಕ ಚಿತ್ರ
ದೇಶ
ಒಡಿಶಾದಲ್ಲಿ ಮಿಂಚು, ಗುಡುಗು: 17 ಮಂದಿ ಸಾವು
ಒಡಿಶಾ ರಾಜ್ಯದ ಹಲವೆಡೆ ಮಿಂಚು, ಗುಡುಗು, ಬಿರುಗಾಳಿಗೆ ಸುಮಾರು 17 ಮಂದಿ ಸಾವನ್ನಪ್ಪಿ 14 ಮಂದಿ ...
ಭುವನೇಶ್ವರ: ಒಡಿಶಾ ರಾಜ್ಯದ ಹಲವೆಡೆ ಮಿಂಚು, ಗುಡುಗು, ಬಿರುಗಾಳಿಗೆ ಸುಮಾರು 17 ಮಂದಿ ಸಾವನ್ನಪ್ಪಿ 14 ಮಂದಿ ಗಾಯಗೊಂಡಿದ್ದಾರೆ.ಭುವನೇಶ್ವರದ ಹೊರವಲಯದ ಲಬನಗರಿ ಎಂಬಲ್ಲಿರುವ ಜಗನ್ನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಮಿಂಚಿಗೆ ಮೂವರು ಬಲಿಯಾಗಿದ್ದಾರೆ.
ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಬಯಲಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಇನ್ನು ಕೆಲವರು ಮರದಡಿಯಲ್ಲಿ ಗುಡಿಸಲು ನಿರ್ಮಿಸಿ ಆಶ್ರಯ ಪಡೆದುಕೊಂಡವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆರ್ಹಾಂಪುರ್ ನಲ್ಲಿ ಭಾರೀ ಹಾನಿಗೀಡಾಗಿದೆ. ಇಂದು ಕೂಡ ಉತ್ತರ ಒಡಿಶಾ ಭಾಗದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಬಹುದೆಂದು ಭುವನೇಶ್ವರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

