ನವದೆಹಲಿಯಲ್ಲಿ ಬೆಂಕಿಪೊಟ್ಟಣದ ಲೇಬಲ್ ಗಳ ಅಪರೂಪದ ಪ್ರದರ್ಶನ

ಬೆಂಕಿ ಪೊಟ್ಟಣದ ಆರಂಭಿಕ ಪ್ರಿಂಟ್ ಗಳಿಂದ ತೀರಾ ಇತ್ತೀಚಿನ ಲೇಬಲ್ ಗಳ ಮೇಲಿನ ಚಿತ್ರಗಳ ಅಂತಾರಾಷ್ಟ್ರೀಯ ಪ್ರದರ್ಶನ .,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಒಲೆ ಹಚ್ಚಲು, ದೀಪ ಬೆಳಗಿಸಲು ಬೆಂಕಿಪೊಟ್ಟಣ ಬೇಕೆಬೇಕು. ಇಂಥ ಬೆಂಕಿ ಪೊಟ್ಟಣಕ್ಕೆ ಬಹಳ ದೊಡ್ಡ ಇತಿಹಾಸವೇ ಇದೆ.

ಭಾರತೀಯರನ್ನು ಆಕರ್ಷಿಸಲು ಕಳೆದ ಶತಮಾನದಿಂದ ಬೆಂಕಿಪೊಟ್ಟಣದ ಮೇಲೆ ಹಲವು ರೀತಿಯ ಚಿತ್ರಗಳನ್ನು ಪ್ರಿಂಟ್ ಮಾಡಲಾಗುತ್ತಿದೆ. ಬೆಂಕಿ ಪೊಟ್ಟಣದ ಆರಂಭಿಕ ಪ್ರಿಂಟ್ ಗಳಿಂದ ತೀರಾ ಇತ್ತೀಚಿನ ಲೇಬಲ್ ಗಳ ಮೇಲಿನ ಚಿತ್ರಗಳ ಅಂತಾರಾಷ್ಟ್ರೀಯ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಪ್ರದರ್ಶನದಲ್ಲಿ ಸಾವಿರಾರು ಆಕರ್ಷಕ ಬೆಂಕಿ ಪೊಟ್ಟಣಗಳ ಲೇಬಲ್ ಪ್ರದರ್ಶನಕ್ಕಿಡಲಾಗಿದೆ. ಅತಿ ಹೆಚ್ಚು ಬೆಂಕಿ ಪೊಟ್ಟಣ ಸ್ವೀಡನ್ ನಲ್ಲಿ ತಯಾರಾಗುತ್ತದೆ. 59 ವರ್ಷದ ಗೌತಮ್ ಹೆಮ್ಮಾಡಿ ಎಂಬ ವಾಸ್ತು ಶಿಲ್ಪಿಯೊಬ್ಬರು 2012 ರ ಜನವರಿಯಿಂದ ಬೆಂಕಿ ಪೊಟ್ಟಣದ ಎಲ್ಲಾ ರೀತಿಯ ಲೇಬಲ್ ಗಳನ್ನು ಸಂಗ್ರಹಿಸುತ್ತಿದ್ದಾರೆ.

ಇವರ ಪ್ರಕಾರ ಬೆಂಕಿ ಪೊಟ್ಟಣ ತಯಾರಿಕೆಯ ಮೂಲ ತಂತ್ರಜ್ಞಾನ ಆರಂಭವಾದದ್ದೇ ಸ್ವೀಡನ್ ನಲ್ಲಿ. ಆಸ್ಟ್ರೀಯ ಮತ್ತು ಜಪಾನ್ ನೆರವಿನೊಂದಿಗೆ ಬೆಂಕಿಪೊಟ್ಟಣ ಉತ್ಪಾದನೆ ಆರಂಭಿಸಲಾಯಿತು.
ಸ್ವೀಡನ್ ನ ಈ ಬೆಂಕಿ ಪೊಟ್ಟಣಗಳಿಗೆ ಭಾರತದಲ್ಲಿ ಆಕರ್ಷಕವಾದ ಬೇಡಿಕೆ ಇತ್ತು. ಆದರೆ ಹೆಚ್ಚಿದ್ದ ಬೇಡಿಕೆಯಷ್ಟು ಪೂರೈಕೆ ಇರಲಿಲ್ಲ ಎಂದು ಹೆಮ್ಮಾಡಿ ಹೇಳಿದ್ದಾರೆ.

ಕೊಲ್ಕೋತಾದ ಎ.ಎಂ ಇಶೋಬಿ ಆಸ್ಟ್ರೀಯಾದಿಂದ ಬೆಂಕಿಪೊಟ್ಟಣ ಆಮದು ಮಾಡಿಕೊಳ್ಳುವ  ಭಾರತದ ಪ್ರಥಮ ಕಂಪನಿಯಾಗಿತ್ತು.

ಮೊದಮೊದಲು ಬೆಂಕಿ ಪೊಟ್ಟಣದ ಲೇಬಲ್ ಮೇಲೆ ಗಡಿಯಾರ, ಮೂರು ಹುಲಿಗಳು, ಆನೆ, ಎರಡು ಜಿಂಕೆ, ಕೊಡಲಿ, ಕತ್ತರಿ, ಲ್ಯಾಂಪ್, ಕುದುರೆ, ವಿಮಾನ, ಟೀ ಕಪ್,ಮತ್ತು ಕೀ ಇರುವ ಚಿತ್ರಗಳಿದ್ದವು.

ಇದಾದ ನಂತರ ಭಾರತದ ಗ್ರಾಹಕರನ್ನು ಆಕರ್ಷಿಸಲು ದೇವತೆಗಳ ಚಿತ್ರ ಪ್ರಿಂಟ್ ಮಾಡಲು ಆಸ್ಟ್ರೀಯ ಮತ್ತು ಸ್ಟೀಡನ್ ಮತ್ತು ಜಪಾನ್ ಕಂಪನಿಗಳು ನಿರ್ಧರಿಸಿದವು. ಅದಾದ ನಂತರ ಬೆಂಕಿಪೊಟ್ಟಣದ ಮೇಲೆ ಹಿಂದೂ ದೇವತೆಗಳಾದ ವಿಷ್ಣು, ತ್ರಿಮೂರ್ತಿ, ಲಕ್ಷ್ಮಿ, ಗಾಯತ್ರಿ, ದುರ್ಗಾ, ಗಣೇಶ, ಲವಕುಶ,ಮತ್ತು ಕೃಷ್ಣನ ಚಿತ್ರಗಳು ಅಚ್ಚಾದವು.

ಇನ್ನೂ ಜಪಾನ್ ಮಲ್ಲಿ ತಯಾರಾದ ಬೆಂಕಿಪೊಟ್ಟಣಗಳಲ್ಲಿ ಜಪಾಮ್ ಶೈಲಿಯ ಶಿವ.ವಿಷ್ಣು, ಬ್ರಹ್ಮ ಮತ್ತು ಕಾಳಿ ದೇವಿಯ ಲೇಬಲ್ ಗಳನ್ನು ಪ್ರಿಂಟಿ ಮಾಡಲಾಯಿತು.

ಭಾರತದಲ್ಲಿ ಬೆಂಕಿಪೊಟ್ಟಣ ತಯಾರಿಕೆ ಆರಂಭವಾದ ಮೇಲೆ ರಾಧಾ ಕೃಷ್ಣ, ಹಿಂದೂಗಳ ಪವಿತ್ರ ವ್ಯಕ್ತಿ, ನಟರಾಜ, ಶಿವಲಿಂಗ, ನಂದಿ, ದುರ್ಗಾ, ಶಿವ ಮತ್ತು ಗಣೇಶ, ಬಾಲಕೃಷ್ಣ ಸೇರಿದಂತೆ ಹಲವು ಧಾರ್ಮಿಕ ಚಿತ್ರಗಳನ್ನು ಪ್ರಿಂಟ್ ಮಾಡಲಾಯಿತು.

ದೇಶ ಭಕ್ತಿಯನ್ನು ಸಾರುವ ಹಲವು ಸಂಕೇತಗಳನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಾವಚಿತ್ರಗಳನ್ನು ಸಹ ಅಚ್ಚು ಮಾಡಲಾಯಿತು.

ಸ್ವಾತಂತ್ರ್ಯ ನಂತರ ಭಾರತದಲ್ಲಿ ಉತ್ಪಾದನೆಯಾದ ಬೆಂಕಿ ಪೊಟ್ಟಣಗಳ ಮೇಲೆ ಕುಟುಂಬ ಯೋಜನೆ ಬಗ್ಗೆ ಸಂದೇಶ ನೀಡುವ ಚಿತ್ರಗಳನ್ನು ಪ್ರಿಂಟ್ ಮಾಡಲಾಯಿತು ಎಂದು ಹೆಮ್ಮಾಡಿ ವಿವರಿಸಿದ್ದಾರೆ.

ನಾನು 8 ವರ್ಷದ ಬಾಲಕನಾಗಿದ್ದಾಗಿಂದ ಬೆಂಕಿ ಪೊಟ್ಟಣದ ಲೇಬಲ್ ಗಳನ್ನು ಸಂಗ್ರಹಿಸಬೇಕೆಂಬ ಆಸೆಯಿತ್ತು. ಆದರೆ 2012 ರಿಂದ ಅದು ಕಾರ್ಯಗತವಾಯಿತು ಎಂದು ಹೇಳುವ ಹೆಮ್ಮಾಡಿ ಸುಮಾರು 25 ಸಾವಿರ ಲೇಬಲ್ ಗಳನ್ನು ಸಂಗ್ರಹಿಸಿದ್ದಾರೆ. ಈ ಬೆಂಕಿಪೊಟ್ಟಣ ಪ್ರದರ್ಶನ ಶುಕ್ರವಾರ ಕೊನೆಗೊಳ್ಳಲಿದೆ. ಈಗ ಪ್ರಸಕ್ತ ತಮಿಳುನಾಡಿನಲ್ಲಿ ಬೆಂಕಿ ಪೊಟ್ಟಣ ತಯಾರಿಕಾ ಕಾರ್ಖಾನೆಯಿದ್ದು.ಯಾವುದೋ ಕಲರ್ ಫುಲ್ ವಿನ್ಯಾಸದ ಲೇಬಲ್ ಗಳನ್ನು ಹಾಕಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com