
ನವದೆಹಲಿ: ಅರ್ಧ ಹಾಗೂ ಒಂದು ಲೀಟರ್ ಹಾಲಿನ ಪ್ಯಾಕ್ ಮೇಲೆ ಅಮುಲ್ ತಲಾ ಒಂದು ರೂಪಾಯಿ ಬೆಲೆ ಏರಿಕೆ ಮಾಡಿದ್ದು, ಪರಿಷ್ಕೃತ ಬೆಲೆ ಶುಕ್ರವಾರದಿಂದಲೇ ಜಾರಿಯಾಗಲಿದೆ.
ಕಳೆದ ಒಂದು ವರ್ಷದಲ್ಲಿ ಅಮುಲ್ ಹಾಲು ತುಟ್ಟಿಯಾಗುತ್ತಿದ್ದು, ಕಳೆದ ಎರಡು ವರ್ಷದಲ್ಲ ಶೇಕಡಾ 20ರಷ್ಟು ಬೆಲೆ ಏರಿಕೆ ಕಂಡಿದೆ. ಪ್ರಸ್ತುತ ಅರ್ಧ ಲೀಟರ್ ಡಬಲ್ ಟೋನ್ಡ್ ಹಾಲಿನ ಬೆಲೆ 18 ರೂ ಹಾಗೂ ಸೋಸಿದ ಹಾಲಿನ ಬೆಲೆ 20ರೂ. ಒಂದು ಲೀಟರ್ ಹಾಲಿನ ಬೆಲೆ 39 ರೂಪಾಯಿಗೆ ತಲುಪಿದೆ.
ಇನ್ನು ಅಮುಲ್ ಗೋಲ್ಡ್ ಅರ್ಧ ಲೀಟರ್ಗೆ 25 ರೂ ಆಗಿದ್ದರೆ, ಒಂದು ಲೀಟರ್ಗೆ 49 ರೂ ಆಗಿದೆ. ಅಮುಲ್ ಪ್ರತಿ ನಿತ್ಯ ರಾಷ್ಟ್ರ ರಾಜಧಾನಿಯ ಸುತ್ತ ಮುತ್ತ ಬರೋಬ್ಬರಿ ಮೂವತ್ತು ಲಕ್ಷ ಹಾಲು ಮಾರಾಟ ಮಾಡುತ್ತಿರುವುದು ವಿಶೇಷ.
Advertisement