ಜಯಲಲಿತಾ
ಜಯಲಲಿತಾ

ರಂಜಾನ್ ಗಾಗಿ ಸಿಎಂ ಜಯಲಲಿತಾರಿಂದ ಮಸೀದಿಗೆಅಕ್ಕಿ ಭಾಗ್ಯ

ರಂಜಾನ್ ಹಬ್ಬಕ್ಕೆ ಮುಖ್ಯಮಂತ್ರಿ ಜಯಲಲಿತಾ ಬಂಪರ್ ಕೊಡುಗೆ ನೀಡಿದ್ದಾರೆ. ರಂಜಾನ್ ಅವಧಿಯಲ್ಲಿ ಮಸೀದಿಗಳಿಗೆ ಉಚಿತ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದಾರೆ...

ಚೆನ್ನೈ: ರಂಜಾನ್ ಹಬ್ಬಕ್ಕೆ ಮುಖ್ಯಮಂತ್ರಿ ಜಯಲಲಿತಾ ಬಂಪರ್ ಕೊಡುಗೆ ನೀಡಿದ್ದಾರೆ. ರಂಜಾನ್ ಅವಧಿಯಲ್ಲಿ ಮಸೀದಿಗಳಿಗೆ ಉಚಿತ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದಾರೆ.

3,000 ಮಸೀದಿಗಳಿಗೆ ಒಟ್ಟು 4,600 ಟನ್ ಅಕ್ಕಿಯನ್ನು ಬಿಡುಗಡೆ ಮಾಡುವುದಾಗಿ ಜಯಲಲಿತಾ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಜಯಲಲಿತಾ ಈ ಯೋಜನೆಯನ್ನು ನಮ್ಮ ಸರ್ಕಾರ 2001ರಿಂದಲೇ ಆರಂಭ ಮಾಡಿದೆ.3000 ಮಸೀದಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದು, ಉತ್ತಮ ದರ್ಜೆಯ ಅಕ್ಕಿ ಮುಸ್ಲಿಮ ಬಾಂಧವರಿಗೆ ಸಿಗುವಂತೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಉಚಿತವಾಗಿಯೇ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಉಚಿತ ವಿತರಣೆ ಯೋಜನೆಯನ್ನು ಮುಂದುವರಿಸಿದ್ದಾರೆ. .

ಮುಂದಿನ ವಾರದಿಂದ ಆರಂಭವಾಗುವ ರಂಜಾನ್‌ ಮಾಸಾಚರಣೆ ಹಿನ್ನೆಲೆಯಲ್ಲಿ ಅಕ್ಕಿ ವಿತರಿಸಬೇಕೆಂದು ತಮಿಳುನಾಡು ಸರಕಾರ ಆದೇಶಿಸಿದೆ. ರಂಜಾನ್‌ ಆಚರಣೆಗೆ ಅಕ್ಕಿ ವಿತರಿಸುವಂತೆ ಮುಸ್ಲಿಂ ಬಾಂಧವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿರುವ 3 ಸಾವಿರ ಮಸೀದಿಗಳಿಗೆ ಸುಮಾರು 4,600 ಟನ್‌ ಅಕ್ಕಿ ವಿತರಿಸುವಂತೆ ಸಿಎಂ ಕಚೇರಿ ಹೊರಡಿಸಿರುವ ಆದೇಶ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com