ಪಾಕಿಸ್ತಾನ, ಬಾಂಗ್ಲಾದ ಹಿಂದೂಗಳಿಗೆ ಶೀಘ್ರವೇ ಭಾರತಿಯ ಪೌರತ್ವ

ಪಾಕಿಸ್ತಾನ, ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಶೀಘ್ರವೇ ಭಾರತೀಯ ಪೌರತ್ವ ಸಿಗಲಿದೆ.
ಪಾಕಿಸ್ತಾನ, ಬಾಂಗ್ಲಾದ ಹಿಂದೂಗಳಿಗೆ ಶೀಘ್ರವೇ ಭಾರತಿಯ ಪೌರತ್ವ

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಶೀಘ್ರವೇ  ಭಾರತೀಯ ಪೌರತ್ವ ಸಿಗಲಿದೆ. ನೆರೆ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಕ್ರಮ ಕೈಗೊಂಡಿರುವ ಕೇಂದ್ರ ಗೃಹ ಸಚಿವಾಲಯ, ಪಾಕ್, ಬಾಂಗ್ಲಾದಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದಿರುವ ಹಿಂದೂಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸುವುದಕ್ಕೆ ಕಡಿವಾಣ ಹಾಕಲು ಪೌರತ್ವ ಕಾನೂನು ತಿದ್ದುಪಡಿ ಮಸೂದೆ ಸಿದ್ಧಪಡಿಸಿದೆ.
1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದ ನಂತರ, ಬಾಂಗ್ಲಾ, ಪಾಕಿಸ್ತಾನದ ಹಿಂದುಗಳು ಭಾರತದಲ್ಲಿ ನೆಲೆಸುವುದಕ್ಕೆ ಕಾನೂನು ಮಾನ್ಯತೆ ನೀಡಿ ಪೌರತ್ವ ಪಡೆಯಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಕನಿಷ್ಠ 2 ಲಕ್ಷ ಹಿಂದೂಗಳಿಗೆ ನೆರವಾಗಲಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಪರಿಗಣಿಸಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹಲವು ಹಿಂದುಗಳು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com