
ಅಹಮದಾಬಾದ್: 2002 ರಲ್ಲಿನಡೆದಿದ್ದ ಗೋಧ್ರಾ ಹತ್ಯಾಕಾಂಡ ಪ್ರಕರಣ ನಡೆದು 14 ವರ್ಷಗಳೇ ಕಳೆದಿದ್ದು, ಗುಲ್ಬರ್ಗ್ ಸೊಸೈಟಿಯ ನಿವಾಸಿಗಳಾದ ರುಪಾ ಹಾಗೂ ದಾರಾ ಮೋದಿ ಎಂಬ ಪಾರ್ಸಿ ದಂಪತಿಗಳು ಹತ್ಯಾಕಾಂಡದಲ್ಲಿ ನಾಪತ್ತೆಯಾದ ತಮ್ಮ ಮಗನಿಗಾಗಿ ಶೋಧಕಾರ್ಯವನ್ನು ಇನ್ನೂ ಮುಂದುವರೆಸಿದ್ದಾರೆ.
ಕಳೆದ 14 ವರ್ಷದ ಹಿಂದೆ 14 ವರ್ಷದವನಾಗಿದ್ದ ಅಜರ್ ಹತ್ಯಾಕಾಂಡ ನಡೆದ ದಿನದಿಂದಲೂ ನಾಪತ್ತೆಯಾಗಿದ್ದಾನೆ. ಕಾನೂನಿನ ದಾಖಲೆಗಳ ಪ್ರಕಾರ ಈತನನ್ನು ಮೃತ ವ್ಯಕ್ತಿ ಎಂದು ಘೋಷಿಸಲಾಗಿದೆ. ಆದರೆ ಪೋಷಕರು ಮಾತ್ರ ತಮ್ಮ ಮಗ ಇನ್ನೂ ಬದುಕಿದ್ದಾನೆ ಎಂಬ ನಂಬಿಕೆಯಲ್ಲೆ ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ರೂಪಾ ಹಾಗೂ ದಾರಾ ಮೋದಿ ದಂಪತಿಗಳ ನಂಬಿಕೆ ಹಾಗೂ ಶ್ರಮ ಹಿಂದಿ ಚಿತ್ರ ಪರ್ಜಾನಿಯಾ ಗೆ ಸ್ಪೂರ್ತಿಯಾಗಿದೆ. ಅನಾಮಿಕ ವ್ಯಕ್ತಿಯಿಂದ ಅಥವಾ ಅನಾಮಿಕ ನಂಬರ್ ನಿಂದ ಕರೆ ಬಂದರೆ ಅದು ತನ್ನ ಮಗನ ಕುರಿತಾಗಿ ಮಾಹಿತಿ ನೀಡುವುದಕ್ಕಾಗಿಯೆ ಬಂದಿರುವ ಕರೆ ಎಂದು ನಂಬುತ್ತೇನೆ. ಪರ್ಜಾನಿಯಾ ಚಿತ್ರ ಹಾಗೂ ನಾಮತ್ತೆಯಾದ ವ್ಯಕ್ತಿಗಳ ಪೋಸ್ಟರ್ ನಲ್ಲಿ ತಮ್ಮ ನಂಬರ್ ನೀಡಲಾಗಿತ್ತು. ಅದ್ದರಿಂದ ಸಾರ್ವಜನಿಕರು ಕರೆ ಮಾಡಿ ಒಬ್ಬ ಹುಡುಗನನ್ನು ನೋಡಿದ್ದಾಗಿ ಹಾಗೂ ಆ ವ್ಯಕ್ತಿಯೇ ತಮ್ಮ ಮಗನಾಗಿರಬಹುದೆಂದೂ ಹೇಳುತ್ತಿದ್ದರು. ಇದು ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತ್ತಿತ್ತು ಎಂದು ರುಪಾ ಮೋದಿ ಹೇಳಿದ್ದಾರೆ. ನಮ್ಮ ಮಗನನ್ನೇ ಹೋಲುವ ಹುಡುಗರನ್ನು ಕೇರಳ ಹಾಗೂ ದೆಹಲ್ಲಿಯಲ್ಲಿ ಕಂದುಬಂದಿದ್ದಾಗಿ ಹಲವು ಕರೆಗಳು ಬಂದಿವೆ, ನಮ್ಮ ಮಗ ಸಿಗುವವರೆಗೂ ಈ ಶೋಧ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೋಷಕರು ತಿಳಿಸಿದ್ದಾರೆ.
Advertisement