ಖಾಡ್ಸೆ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್, ಎಎಪಿ ಆಗ್ರಹ

ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕನಾಥ್ ಖಾಡ್ಸೆ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಬೇಕು...
ಏಕನಾಥ್ ಖಾಡ್ಸೆ
ಏಕನಾಥ್ ಖಾಡ್ಸೆ
ಮುಂಬೈ: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕನಾಥ್ ಖಾಡ್ಸೆ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಬೇಕು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಆಗ್ರಹಿಸಿವೆ. 
ಖಾಡ್ಸೆ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ವರ ರಾಜಿನಾಮೆ ತೆಗೆದುಕೊಂಡರೆ ಸಾಲದು, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಚವ್ಹಾಣ್ ಹೇಳಿದ್ದಾರೆ. 
ಖಾಡ್ಸೆ ರಾಜಿನಾಮೆ ನೀಡಿದ್ದು ಸರಿಯಾಗಿದೆ. ಎಂಐಡಿಸಿ ಭೂಮಿ ಹಗರಣ ಮತ್ತು ಭೂಗತ ಪಾತಕಿ ದಾವೂದ್ ನೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ರಾಜಿನಾಮೆ ನೀಡುವುದು ಅನಿರ್ವಾಯವಾಗಿತ್ತು. ಆದರೆ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. 
ಮಾಜಿ ಎಎಪಿ ನಾಯಕಿ ಅಂಜಲಿ ದಮಾನಿಯಾ, ಖಾಡ್ಸೆ ರಾಜಿನಾಮೆ ನೀಡಿದರೆ ಸಾಲದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನನ್ನ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ. ಖಾಡ್ಸೆ ಜೊತೆಗೆ ಅನೇಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com