ಧರ್ಮದ ತಡೆಗೋಡೆ ಮುರಿದ ಗುಜರಾತ್ ಗಲಭೆ ಸಂತ್ರಸ್ತನ ಜೀವನ!

2002ರ ಗುಜರಾತ್ ಹಿಂಸಾಚಾರದ ವೇಳೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ಇಂದಿಗೂ ಮರೆಯಲಾಗದ ಧಾರುಣ ಘಟನೆ. ಆದರೆ, ಹತ್ಯಾಕಾಂಡ ವೇಳೆ...
ಮುಸ್ಲಿಮನಾಗಿ ಹುಟ್ಟಿ, ಹಿಂದೂವಾದ ಗುಜರಾತ್ ಗಲಭೆಯ ಸಂತ್ರಸ್ತ ಬಾಲಕ
ಮುಸ್ಲಿಮನಾಗಿ ಹುಟ್ಟಿ, ಹಿಂದೂವಾದ ಗುಜರಾತ್ ಗಲಭೆಯ ಸಂತ್ರಸ್ತ ಬಾಲಕ

ನವದೆಹಲಿ: 2002ರ ಗುಜರಾತ್ ಹಿಂಸಾಚಾರದ ವೇಳೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ಇಂದಿಗೂ ಮರೆಯಲಾಗದ ಧಾರುಣ ಘಟನೆ. ಆದರೆ, ಹತ್ಯಾಕಾಂಡ ವೇಳೆ ಕಾಣೆಯಾಗಿದ್ದ 2 ವರ್ಷದ ಬಾಲಕನೊಬ್ಬನ ಪ್ರಯಾಣ ಇದೀಗ ಧರ್ಮವೆಂಬ ತಡೆಗೋಡೆಯನ್ನು ಮುರಿದಿದೆ.

ಮುಸ್ಲಿಂನಾಗಿ ಹುಟ್ಟಿದ್ದ ಬಾಲಕನೊಬ್ಬ ಹತ್ಯಾಕಾಂಡದ ವೇಳೆ ಕಾಣೆಯಾಗಿ, ಹಿಂದೂ ಕುಟುಂಬದಲ್ಲಿ ಬೆಳೆದು ಇದೀಗ ಹಿಂದೂವಾಗಿಯೇ ತನ್ನ ಜೀವನದ ಪ್ರಯಾಣವನ್ನು ಮುಂದುವರೆಸಿದ್ದಾನೆ.

ಗುಲ್ಬರ್ಗ್ ಹತ್ಯಾಕಾಂಡದ ವೇಳೆ ಮುಜಾಫರ್ ಎಂಬ 2 ವರ್ಷದ ಮಗುವೊಂದು ಕಾಣೆಯಾಗಿತ್ತು. ಈ ಮಗು ಮುಸ್ಲಿಂ ಕುಟುಂಬದ್ದಾಗಿದ್ದು, 2008ರಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಹಿಂದೂ ಕುಟುಂಬವೊಂದಕ್ಕೆ ಮಗು ಸಿಕ್ಕಿತ್ತು. ಮಗುವಿಗೆ ವಿಕ್ರಮ್ ಪಾಟ್ನಿ ಎಂಬ ಹೆಸರಿಟ್ಟಿದ್ದ ಕುಟುಂಬ ತಮ್ಮ ಮಗನಂತೆ ಸಾಕಿ ಸಲಹಿದೆ.

ಇದೀಗ ಬಾಲಕನ ಸುಪರ್ದಿ ಕುರಿತಂತೆ ಕಾನೂನು ಹೋರಾಟಗಳು ನಡೆಸುತ್ತಿದೆ. ಮಗುವನ್ನು ಹೆತ್ತ ತಂದೆ-ತಾಯಿಗಳಿಗೆ ಒಪ್ಪಿಸುವುದೋ ಅಥವಾ ಸಾಕಿದ ತಂದೆ-ತಾಯಿಗಳಿಗೆ ಒಪ್ಪಿಸುವ ಕುರಿತಂತೆ ನ್ಯಾಯಾಲಯದಲ್ಲಿ ಹಲವು ವಾದಗಳು ಸೃಷ್ಟಿಯಾಗಿವೆ.

ಬಾಲಕ ಸುಪರ್ದಿ ಕುರಿತಂತೆ ಗುಜರಾತ್ ಹೈ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಬಾಲಕ ಕೂಡ ಹೆತ್ತ ತಂದೆ-ತಾಯಿಗಳೊಂದಿಗೆ ಹೋಗಲು ನಿರಾಕರಿಸಿದ್ದಾನೆ. ಹೀಗಾಗಿ ನ್ಯಾಯಾಲಯ ಇದೀಗ ಸಾಕಿದ ತಂದೆ-ತಾಯಿಗಳಿಗೆ ನೀಡಲು ತೀರ್ಮಾನಿಸಿದೆ.

ಅಲ್ಲದೆ, ಮಗುವಿನ ಪೋಷಣೆಯನ್ನು ಸಾಕಿದ ಹಾಗೂ ಹೆತ್ತ ತಂದೆ-ತಾಯಿಗಳಿಬ್ಬರೂ ನೋಡಿಕೊಳ್ಳುವಂತೆ ತಿಳಿಸಿದ್ದು, ಬಾಲಕ ಆಗಾಗ ಹೆತ್ತ ತಂದೆ-ತಾಯಿಗಳನ್ನು ನೋಡಲು ಹೋಗಬಹುದು ಎಂದು ಹೇಳಿದೆ.

ಕೆಲವು ದಿನಗಳ ಹಿಂದಷ್ಟೇ ಹೋರಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಗುಲ್ಬರ್ಗ್ ಹತ್ಯಾಕಾಂಡ ಸಂತ್ರಸ್ತನ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು. ಹತ್ಯಾಕಾಂಡ ನಂತರ ಪೊಲೀಸರಿಗೆ ಮಗು ಸಿಕ್ಕಿದೆ. ಆದರೆ, ಪೊಲೀಸರು ಕಾನೂನು ವಿಧಾನಗಳನ್ನು ಅನುಸರಿಸದೆಯೇ ಮಗುವನ್ನು ಬೇರೆ ದಂಪತಿಗಳಿಗೆ ನೀಡಿದ್ದಾರೆ. ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com