

ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತವರಿ ತೆರವು ಕಾರ್ಯಾಚರಣೆ ವೇಳೆ ನಡೆದ 27 ಜನರ ಸಾವಿಗೆ ಕಾರಣವಾದ ಭೀಕರ ಹಿಂಸಾಚಾರ ಘಟನೆಯ ಮಾಸ್ಟರ್ ಮೈಂಡ್ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವರೆಗೂ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ತಲೆಮರೆಸಿಕೊಂಡಿದ್ದಾನೆ ಹೇಳಲಾಗುತ್ತಿತ್ತಾದರೂ, ದುರಂತ ನಡೆದ ಸ್ಥಳದಲ್ಲಿ ದೊರೆತ ಕೆಲ ಶವಗಳ ಪೈಕಿ ಒಂದು ಶವ ರಾಮ್ ವೃಕ್ಷ್ ಯಾದವ್ ನನ್ನು ಹೋಲುತ್ತಿತ್ತು. ಅನುಮಾದಿಂದ ಪರೀಕ್ಷೆ ನಡೆಸಿದ ಪೊಲೀಸರಿಗೆ ಅದು ರಾಮ್ ವೃಕ್ಷ್ ಯಾದವ್ ನದ್ದೇ ಎಂದು ಖಚಿತವಾಗಿದೆ. ಆ ಬಳಿಕವೇ ಪೊಲೀಸರು ಶನಿವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗುರುವಾರ ಸಂಭವಿಸಿದ ಗಲಭೆಯಲ್ಲಿ ಹಲವರ ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೃತರ ಪತ್ತೆ ಕಷ್ಟಸಾಧ್ಯವಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ರ ಅನುಯಾಯಿ ಎಂದು ಹೇಳಿಕೊಳ್ಳುತ್ತಿದ್ದ ಯಾದವ್, ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಕಟ್ಟಿಕೊಂಡು, ಮಥುರಾದಲ್ಲಿನ ಜವಾಹರ್ ಭಾಗ್ ಪಾರ್ಕ್ ಅತಿಕ್ರಮಿಸಿಕೊಂಡಿದ್ದ.
Some of the dead in Mathura operation identified. Rambriksh Yadav's body identified by associates. Family intimated for final confirmation.
— Javeed (@javeeddgpup) June 4, 2016