ಪತ್ನಿ ಕೊಂದು ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ!

ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಧಾರುಣವಾಗಿ ಕೊಂದು ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಸತತ 5 ದಿನಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಧಾರುಣವಾಗಿ ಕೊಂದು ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಸತತ 5 ದಿನಗಳ ಬಳಿಕ  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ದೆಹಲಿ ಮೂಲದ 25 ವರ್ಷದ ಪ್ರದೀಪ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ  ಪ್ರಕಾರ ಕಳೆದ ಮೇ 30ರಂದು  ಕೌಟುಂಬಿಕ ಕಲಹ ಮತ್ತು ಹಣದ ವಿಚಾರವಾಗಿ ಪ್ರದೀಪ್ ಶರ್ಮಾ ತನ್ನ ಪತ್ನಿ ಮೋನಿಕಾರೊಂದಿಗೆ ಜಗಳಕ್ಕಿಳಿದಿದ್ದ. ಜಗಳ ವಿಕೋಪಕ್ಕೆ ತಿರುಗಿ ಕಂಠಪೂರ್ತಿ  ಕುಡಿದಿದ್ದ ಪ್ರದೀಪ್ ಆಕೆಯ ತಲೆಯನ್ನು ಹಿಡಿದು ಜೋರಾಗಿ ಗೋಡೆಗೆ ಒಂದೇ ಸಮನೆ ಬಡಿದಿದ್ದಾನೆ. ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದಾಗಿ ಪತ್ನಿ ಮೋನಿಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ತೀವ್ರ ರಕ್ತ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಶೌಚಗೃಹಕ್ಕೆ ಎಳೆದೊಯ್ದ ಪ್ರದೀಪ್ ಆಕೆಯ ಮೈಮೇಲೆ ಇದ್ದ ರಕ್ತವನ್ನು ತೊಳೆದು ಬಳಿಕ ಶವವನ್ನು ತನ್ನ ಕೊಠಡಿಗೆ ತಂದು ಬೆಳಗಿನ  ಜಾವದವರೆಗೂ ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬೆಳಗ್ಗೆ ಎದ್ದ ಪ್ರದೀಪ್ ಗೆ ತನ್ನ ಮಡದಿಯನ್ನು ಕೊಂದ ವಿಚಾರ ತಿಳಿದು ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.  ನೆರೆಮನೆಯವರಿಂದ ವಿಚಾರ ಪೊಲೀಸರಿಗೆ ತಿಳಿದಿದ್ದು, ಪ್ರಕರಣ ನಡೆದ 5 ದಿನಗಳ ಬಳಿಕ ಪೊಲೀಸರು ಇದೀಗ ಕೊಲೆಗಾರ ಪತಿ ಪ್ರದೀಪ್ ಶರ್ಮಾನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಶ್ಚಿಮ ದೆಹಲಿಯ ಡಿಸಿಪಿ ಪುಷ್ಪೇಂದ್ರ ಕುಮಾರ್ ಅವರು, ಉತ್ತರಪ್ರದೇಶ ಮೂಲದ ಪ್ರದೀಪ್ ಶರ್ಮಾ ಹಾಗೂ ಮೋನಿಕಾ ಪರಸ್ಪರ ಪ್ರೀತಿಸಿ  ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ನಂತರ ಈ ದಂಪತಿ ದೆಹಲಿಗೆ ತಮ್ಮ ವಾಸ್ತ್ಯವನ್ನು ಬದಲಾಯಿಸಿಕೊಂಡಿದ್ದರು. ನಿರುದ್ಯೋಗಿಯಾಗಿದ್ದ ಪ್ರದೀಪ್ ಅಟೋರಿಕ್ಷಾ ಚಾಲಕನಾಗಿ ಕೆಲಸ  ಮಾಡಲು ಪ್ರಾರಂಭಿಸಿದ್ದ. ಆದರೆ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಪ್ರದೀಪ್‍ಗೆ ದೊರೆಯದ ಕಾರಣ ಮನೆಯಲ್ಲಿ ದಿನನಿತ್ಯ ಜಗಳಗಳಾಗುತ್ತಿತ್ತು. ಕಳೆದ ಸೋಮವಾರ ಮನೆ  ಮಾಲೀಕ ಬಾಡಿಗೆ ಕಟ್ಟದ ವಿಷಯದಲ್ಲಿ ದಂಪತಿಯನ್ನ ತರಾಟೆಗೆತ್ತಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಜಗಳ ಅತಿರೇಕಕ್ಕೆ ಹೋಗಿದ್ದು, ಮದ್ಯದ ಅಮಲಿನಲ್ಲಿ 23 ವರ್ಷದ ಮೋನಿಕಾಳನ್ನು ಕೊಲೆ  ಮಾಡಿರುವುದಾಗಿ ಪ್ರದೀಪ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಪಿ ಪ್ರದೀಪ್ ಕೊಲೆ ಬಳಿಕ ತನ್ನ ಗುರುತು ಯಾರಿಗೂ ಸಿಗದಿರಲಿ ಎಂದು ತನ್ನ ಪತ್ನಿಯ  ಮೊಬೈಲ್, ಗುರುತಿನ ಚೀಟಿ ಸೇರಿದಂತೆ ಆತನಿಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದ ಎಂದು ತಿಳಿಸಿದ್ದಾರೆ.

ಇದೀಗ ಪೊಲೀಸರ ಬಳಿ ಪ್ರದೀಪ್ ತನ್ನ ತಪ್ಪೊಪ್ಪಿಕೊಂಡಿದ್ದು, ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಅಲ್ಲದೆ ಆಕೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ನೋವಲ್ಲಿ ನಾನು ಕಂಠಪೂರ್ತಿ  ಕುಡಿದಿದ್ದೆ. ಬಳಿಕ ನಡೆದೆ ಜಗಳದಿಂದ ಕುಡಿದ ಅಮಲಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಪ್ರದೀಪ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಪ್ರಸ್ತುತ ಆರೋಪಿ ಪ್ರದೀಪ್ ವಿರುದ್ಧ  ಪೊಲೀಸರು ಕೊಲೆ, ಕುಡಿದ ಅಮಲಿನಲ್ಲಿ ಅಪರಾಧ ಕುರಿತ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com