ವಾಟ್ಸಪ್ ನಲ್ಲಿ ವದಂತಿ ಹಬ್ಬಿಸಿದ ಆರು ಮಂದಿಗೆ ನೋಟೀಸ್

ವಾಟ್ಸಪ್ ಮೂಲಕ ವದಂತಿಗಳನ್ನು ಹಬ್ಬಿಸಿ ಸಮಾಜದ ಶಾಂತಿಯನ್ನು ಕೆದಡುವ ಪ್ರಯತ್ನ ಮಾಡಿದ ಆರು ಮಂದಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಇಂಡೋರ್: ವಾಟ್ಸಪ್ ಮೂಲಕ ವದಂತಿಗಳನ್ನು ಹಬ್ಬಿಸಿ ಸಮಾಜದ ಶಾಂತಿಯನ್ನು ಕೆದಡುವ ಪ್ರಯತ್ನ ಮಾಡಿದ ಆರು ಮಂದಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. 
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹೆಚ್ಚಾಗಿ ಹಬ್ಬಿಸಲಾಗುತ್ತಿದೆ. ಅದರಲ್ಲೂ ವಾಟ್ಸಪ್ ನಲ್ಲಿ ಗ್ರೂಪ್ ರಚಿಸಿಕೊಂಡು ವದಂತಿಗಳನ್ನು ಹಬ್ಬಿಸಿ ಸಮಾಜದ ಶಾಂತಿಯನ್ನು ಕದಡುವ ಪ್ರಯತ್ನ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ವದಂತಿ ಹಬ್ಬಿಸುವ ಪ್ರಯತ್ನ ಮಾಡಿದ ಆರು ಮಂದಿಗೆ ನೋಟೀಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಮೂರು ಗ್ರೂಪ್ ಅಡ್ಮಿನ್ ಗಳಿಗೆ ಹಾಗೂ ಆರು ಮಂದಿಗೆ ಸುಳ್ಳು ವದಂತಿ ಹಬ್ಬಿಸಿದ ಆರೋಪದ ಮೇಲೆ ನೋಟೀಸ್ ನೀಡಲಾಗಿದೆ ಎಂದು ಅಪರಾಧ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ವದಂತಿಗಳನ್ನು ಹಬ್ಬಿಸಲಾಗುತ್ತಿದ್ದು, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟೀಸ್ ನೀಡಲಾಗಿದೆ. ನೋಟೀಸ್ ನೀಡಿರುವ ಮೂರು ಗ್ರೂಪ್ ನಲ್ಲಿ ಒಂದು ಗ್ರೂಪ್ ಮಹಿಳೆ ಮೇಲೆ 'ಡೆಡ್ಲಿ ಆಟ್ಯಾಕ್' ಎಂಬ ಸಂದೇಶವನ್ನು ಹಬ್ಬಿಸಿತ್ತು. ಇದರಲ್ಲಿ ಮಹಿಳೆಯ ಮೇಲಿನ ದಾಳಿಯನ್ನು ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿ ಸಮಾಜದ ಶಾಂತಿಯನ್ನು ಕದಡುವ ಹಂತಕ್ಕೆ ಬಂದಿತ್ತು. ಅಷ್ಟರಲ್ಲಿ ಎಚ್ಚೆತ್ತುಕೊಂಡಿದ್ದು, ವದಂತಿ ಹರಡಿಸುವ ಗ್ರೂಪ್ ಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದು, ಮೂರು ಗ್ರೂಪ್ ಗಳಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
ಕಳೆದ ವರ್ಷ ಅಪರಾಧಕ್ಕೆ ಸಂಬಂಧ ಪಟ್ಟಂತೆ ವದಂತಿ ಹಬ್ಬಿಸಿದ್ದ 92 ಮಂದಿ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದರು, ಇದೇ ತಂಡ ಕೋಮುಗಲಭೆ ಹಬ್ಬಿಸಲು ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com