ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕ್ ಪಾತ್ರ ಎತ್ತಿ ತೋರಿಸಿದ ಚೀನಾ

ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದ ಚೀನಾ, ಭಾರತದಲ್ಲಿ ನಡೆದ 2008 ರ ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವನ್ನು ಎತ್ತಿ ತೋರಿಸಿ ಅಚ್ಚರಿ ಮೂಡಿಸಿದೆ.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕ್ ಪಾತ್ರ ಎತ್ತಿ ತೋರಿಸಿದ ಚೀನಾ

ಹಾಂಕ್ ಕಾಂಗ್: ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದ ಚೀನಾ, ಭಾರತದಲ್ಲಿ ನಡೆದ 2008 ರ ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವನ್ನು ಎತ್ತಿ ತೋರಿಸಿ ಅಚ್ಚರಿ ಮೂಡಿಸಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಸಿಸಿಟಿವಿ 9 ನಲ್ಲಿ ಮುಂಬೈ ಉಗ್ರ ದಾಳಿ ಬಗ್ಗೆ ಇತ್ತೀಚೆಗಷ್ಟೇ ಪ್ರಸಾರವಾಗಿದ್ದ ಸಾಕ್ಷ್ಯ ಚಿತ್ರದಲ್ಲಿ, ಚೀನಾ ಪಾಕಿಸ್ತಾನ ಹಾಗೂ ಪಾಕ್ ಉಗ್ರ ಸಂಘಟನೆಯ ಪಾತ್ರ ಇರುವುದನ್ನು ಎತ್ತಿ ತೋರಿಸಿದೆ. ಪಾಕಿಸ್ತಾನ ಉಗ್ರ  ಮಸೂದ್ ಅಜರ್ ನ್ನು ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವ ವಿಷಯಕ್ಕೆ ಚೀನಾ ಅಡ್ಡಗಾಲು ಹಾಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಆದರೆ ಪಾಕ್ ಉಗ್ರರ ಬಗ್ಗೆ ಈಗ ಚೀನಾದ ನಿಲುವು ಬದಲಾವಣೆಗೊಂಡಿರುವುದು ಸಾಕ್ಷ್ಯಚಿತ್ರದ ಮೂಲಕ ತಿಳಿದುಬಂದಿದೆ.
ಪಾಕಿಸ್ತಾನ ಉಗ್ರರಾದ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ, ತಹ್ಲಾ ಸಯೀದ್ ಹಾಗೂ ಹಫೀಜ್ ಅಬ್ದುಲ್ ರೌಫ್ ಗೆ ನಿಷೇಧ ವಿಧಿಸುವ ವಿಚಾರಕ್ಕೆ ವಿಶ್ವ ಸಂಸ್ಥೆಯಲ್ಲಿ ಜೂ.9 ರಂದು ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಬೆಕಿದ್ದು ಇದಕ್ಕೂ ಮುನ್ನ ಮುಂಬೈ ದಾಳಿಯ ಸಾಕ್ಷ್ಯ ಚಿತ್ರವನ್ನು ಮುಂದಿಟ್ಟುಕೊಂಡು ಚೀನಾ ಪಾಕ್ ಉಗ್ರರಿಗೆ ನಿಷೇಧ ವಿಧಿಸುವುದಕ್ಕೆ ಬೆಂಬಲ ನೀಡುವ ಸೂಚನೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಫೀಜ್ ಸಯೀದ್ ನನ್ನು ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವ ಭಾರತದ ಯತ್ನಕ್ಕೆ ಈಗಾಗಲೇ ಅಡ್ಡಗಾಲು ಹಾಕಿರುವುದಕ್ಕೆ ಚೀನಾ ಸಾಕಷ್ಟು ವಿರೋಧ ಎದುರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com