ಶಾಸಕಾ೦ಗ ವಿಫಲವಾದಾಗ ಮಾತ್ರ ನ್ಯಾಯಾ೦ಗದ ಹಸ್ತಕ್ಷೇಪ: ಟಿಎಸ್ ಠಾಕೂರ್

ಸಂವಿಧಾನಾತ್ಮಕ ಕತ೯ವ್ಯ ನಿವ೯ಹಿಸುವಲ್ಲಿ ಯಾವಾಗಾ ಶಾಸಕಾ೦ಗ ವಿಫಲವಾಗುತ್ತದೆಯೋ ಆಗ ಮಾತ್ರ ನ್ಯಾಯಾ೦ಗ ಮಧ್ಯಪ್ರವೇಶಿಸುತ್ತದೆ ಎ೦ದು ಸುಪ್ರೀ೦ಕೋಟ್‍೯ನ ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ ಹೇಳಿದ್ದಾರೆ...
ಸುಪ್ರೀ೦ಕೋಟ್‍೯ನ ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ (ಸಂಗ್ರಹ ಚಿತ್ರ)
ಸುಪ್ರೀ೦ಕೋಟ್‍೯ನ ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಸಂವಿಧಾನಾತ್ಮಕ ಕತ೯ವ್ಯ ನಿವ೯ಹಿಸುವಲ್ಲಿ ಯಾವಾಗಾ ಶಾಸಕಾ೦ಗ ವಿಫಲವಾಗುತ್ತದೆಯೋ ಆಗ ಮಾತ್ರ ನ್ಯಾಯಾ೦ಗ ಮಧ್ಯಪ್ರವೇಶಿಸುತ್ತದೆ ಎ೦ದು ಸುಪ್ರೀ೦ಕೋಟ್‍೯ನ  ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ ಹೇಳಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟಿಎಸ್ ಠಾಕೂರ್ ಅವರು, ಸಕಾ೯ರ ಅದರ ಕತ೯ವ್ಯ ನಿವ೯ಹಿಸಬೇಕು. ಆದರೆ ಯಾವಾಗ ಸರ್ಕಾರ ಸಂವಿಧಾನಾತ್ಮಕ  ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತದೆಯೋ ಆಗ ನ್ಯಾಯಾಂಗ ಅನಿವಾರ್ಯವಾಗಿ ನ್ಯಾಯಾಂಗದ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಕೇಂದ್ರ ಸಚಿಪ ಅರುಣ್ ಜೇಟ್ಲಿ ಅವರು ಶಾಸಕಾ೦ಗದ ಕಾಯ೯ಗಳಲ್ಲಿ ನ್ಯಾಯಾ೦ಗ ಹಸ್ತಕ್ಷೇಪ ಮಾಡುತ್ತಿದೆ ಎ೦ದು ಆರೋಪಿಸಿದ್ದರು. ಅರುಣ್ ಜೇಲ್ವಿ ಅವರ ಆರೋಪಕ್ಕೆ  ಸಂಬಂಧಿಸಿದಂತೆ ಉತ್ತರಿಸಿದ ಟಿಎಸ್ ಠಾಕೂರ್ ಅವರು, "ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದಾಗ ಪ್ರಜೆಗಳು ನ್ಯಾಯಾಲಯಗಳ ಮೊರೆ ಹೋಗುತ್ತಾರೆ. ಅ೦ಥಹ  ಸ೦ದಭ೯ಗಳಲ್ಲಿ ನ್ಯಾಯಾಂಗ ಅಥವ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಿ ತಮ್ಮ ಕತ೯ವ್ಯ ನಿವ೯ಹಿಸುತ್ತದೆ. ಸಕಾ೯ರ ಸರಿಯಾಗಿ ಆಡಳಿತ ನಡೆಸಿದರೆ ನಾವು ಹಸ್ತಕ್ಷೇಪ ಮಾಡುವ  ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.  ಇದೇ ವೇಳೆ ನ್ಯಾಯಾಧೀಶರ ನೇಮಕಾತಿ ವಿಚಾರವನ್ನೂ ಪ್ರಸ್ತಾಪಿಸಿದ ಠಾಕೂರ್, ಈ ಕುರಿತು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಮನವಿ ಮಾಡಿದ್ದೇನೆ ಎ೦ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com