ಅಪ್ರಾಪ್ತೆಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಗೆ ವಿರೋಧ: ಸಹೋದರನ ಮೇಲೆ ಗುಂಡಿನ ದಾಳಿ

ಅಪ್ರಾಪ್ತ ಸಹೋದರಿಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಗೆ ವಿರೋಧ ವ್ಯಕ್ತಪಡಿಸಿದ 20 ವರ್ಷದ ಯುವಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಅಪ್ರಾಪ್ತೆಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಗೆ ವಿರೋಧ: ಸಹೋದರನ ಮೇಲೆ ಗುಂಡಿನ ದಾಳಿ

ನವದೆಹಲಿ: ಅಪ್ರಾಪ್ತ ಸಹೋದರಿಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಗೆ ವಿರೋಧ ವ್ಯಕ್ತಪಡಿಸಿದ 20 ವರ್ಷದ ಯುವಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ದೆಹಲಿಯ ವಿಜಯ್ ವಿಹಾರ್ ದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಗುಂಡಿನ ದಾಳಿಗೊಳಗಾದ ವ್ಯಕ್ತಿಯ ಅಪ್ರಾಪ್ತ ಸಹೋದರಿಯೊಂದಿಗೆ ಕಳೆದ ಒಂದು ವರ್ಷದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರಾದರೂ ಅಪ್ರಾಪ್ತೆ ಹಾಗೂ ಆರೋಪಿಯ ನಡುವೆ ಜಗಳ ಉಂಟಾಗಿ, ಅಪ್ರಾಪ್ತೆ ವಿಜಯ್ ವಿಹಾರ್ ನಲ್ಲಿರುವ ಪೋಷಕರ ಮನೆಗೆ ಧಾವಿಸಿದ್ದಾಳೆ.

ಯುವತಿಯ ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಆರೋಪಿ ಗನ್ ಹಿಡಿದು ಯುವತಿಯ ಮನೆಗೆ ನುಗ್ಗಿ ತನ್ನ ಹಾಗೂ ಅಪ್ರಾಪ್ತೆಯ ಲಿವ್ ಇನ್ ರಿಲೇಷನ್ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಒಂದು ವೇಳೆ ನಿರಾಕರಿಸಿದರೆ ಕುಟುಂಬದ ಎಲ್ಲಾ ಸದಸ್ಯರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಯುವತಿಯ ಸಹೋದರ- ಆರೋಪಿಯ ನಡುವೆ ವಾಗ್ವಾದ ನಡೆದಿದ್ದು ಯುವತಿಯ ಸಹೋದರನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಯುವಕ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೆತರಿಸಿಕೊಳ್ಳುತ್ತಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com