ಹೃದಯದಲ್ಲಿ ರಂಧ್ರವಿದ್ದ ಬಾಲಕಿಗೆ ಉಚಿತ ಶಸ್ತ್ರಚಿಕಿತ್ಸೆಗೆ ನೆರವಾದ ಪ್ರಧಾನಿ

ಹೃದಯದಲ್ಲಿ ರಂಧ್ರವಿದ್ದು ಚಿಕಿತ್ಸೆ ಭರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಆರು ವರ್ಷದ ಬಾಲಕಿಗೆ ಪ್ರಧಾನ ಮಂತ್ರಿ...
ಹೃದಯದ ರಂಧ್ರದ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕಿ ವೈಶಾಲಿ ಯಾದವ್
ಹೃದಯದ ರಂಧ್ರದ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕಿ ವೈಶಾಲಿ ಯಾದವ್

ಪುಣೆ: ಹೃದಯದಲ್ಲಿ ರಂಧ್ರವಿದ್ದು ಚಿಕಿತ್ಸೆ ಭರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಆರು ವರ್ಷದ ಬಾಲಕಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಹದಪ್ಸರ್ ನ ಆರು ವರ್ಷದ ಬಾಲಕಿ ವೈಶಾಲಿ ಯಾದವ್ ಗೆ ಹೃದಯದಲ್ಲಿ ರಂಧ್ರವಿತ್ತು. ಸರ್ಜರಿ ಮಾಡಿಸಲು ಆಕೆಯ ಬಳಿ ಸಾಕಷ್ಟು ಹಣವಿರಲಿಲ್ಲ. ಇದರಿಂದ ಆರ್ಥಿಕ ನೆರವು ಕೋರಿ ಬಾಲಕಿಯೇ ಪ್ರಧಾನಿಗೆ ಪತ್ರ ಬರೆದು ಶಾಲೆಯ ಗುರುತು ಪತ್ರವನ್ನು ಜೊತೆಗಿಟ್ಟು ಪ್ರಧಾನ ಮಂತ್ರಿ ಕಚೇರಿಗೆ ಪೋಸ್ಟ್ ಮಾಡಿದ್ದಳು. ಪತ್ರ ಕಳುಹಿಸಿದ ಐದನೇ ದಿನಕ್ಕೆ ಪ್ರಧಾನಿ ಕಡೆಯಿಂದ ಬಾಲಕಿಗೆ ಉತ್ತರ ಬಂತು.
ಪ್ರಧಾನಿ ಸಚಿವಾಲಯದ ಅಧಿಕಾರಿಗಳ ಆದೇಶದಂತೆ ಪುಣೆ ಜಿಲ್ಲಾಧಿಕಾರಿ ಆಸ್ಪತ್ರೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ವೈಶಾಲಿಗೆ ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಉಚಿತ ಶಸ್ತ್ರಚಿಕಿತ್ಸೆಗೆ ಏರ್ಪಾಡು ಮಾಡಲಾಯಿತು.

ವೈಶಾಲಿ ಫುರ್ಸುಂಗಿಯ ಪ್ರದ್ನ್ಯ ಶಿಶು ವಿಹಾರ ಶಾಲೆಯಲ್ಲಿ ಒದುತ್ತಿದ್ದು, ಬಿಪಿಎಲ್ ವರ್ಗಕ್ಕೆ ಸೇರಿದ್ದಾಳೆ. ಆದರೆ ಆಕೆಯ ಪೋಷಕರ ಬಳಿ ಬಿಪಿಎಲ್ ದಾಖಲೆಗಳು ಕಳೆದುಹೋಗಿದ್ದವು. ಹೀಗಾಗಿ ಬಿಪಿಎಲ್ ಆರೋಗ್ಯ ಯೋಜನೆಗಳು ಯಾವುದೂ ಸರ್ಕಾರದಿಂದ ಸಿಗುತ್ತಿರಲಿಲ್ಲ. ಈಕೆ ತನ್ನ ಚಿಕ್ಕಪ್ಪ ಪ್ರತಾಪ್ ಯಾದವ್ ಜೊತೆ ವಾಸವಾಗಿದ್ದಳು. ಅವರು ಪೈಂಟರ್ ಆಗಿ ಉದ್ಯೋಗ ಮಾಡುತ್ತಿದ್ದರು, ವೈಶಾಲಿಗೆ ಚಿಕಿತ್ಸೆ ಕೊಡಿಸುವಷ್ಟು ಹಣವಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಪ್ರಧಾನಿಗೆ ಯಾಕೆ ನೇರವಾಗಿ ಪತ್ರ ಬರೆಯಬಾರದು ಎನಿಸಿತು.

ಬಾಲಕಿಗೆ ಚಿಕಿತ್ಸೆ ಕೊಡಿಸುವುದು ಹೇಗೆ ಎಂಬ ಯೋಚನೆಯಲ್ಲಿ ಪ್ರತಾಪ್ ಯಾದವ್ ಇದ್ದರಂತೆ. ಆಗ ವೈಶಾಲಿಗೆ ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿಗೆ ಯಾಕೆ ಪತ್ರ ಬರೆಯಬಾರದು ಎನಿಸಿತಂತೆ. ತಕ್ಷಣವೇ ನೋಟ್ ಪುಸ್ತಕದಿಂದ ಪೇಪರ್, ಪೆನ್ನು ತೆಗೆದು ಪ್ರಧಾನಿಯನ್ನುದ್ದೇಶಿಸಿ ಪತ್ರ ಬರೆದಳಂತೆ. ಇದಕ್ಕೆ ಅವಳ ಚಿಕ್ಕಪ್ಪನೂ ಒಪ್ಪಿಕೊಂಡರು. ಪತ್ರದಲ್ಲಿ ತನ್ನೆಲ್ಲಾ ಪರಿಸ್ಥಿತಿಯನ್ನು ವಿವರಿಸಿದ್ದಳು. ಪತ್ರ ಕಳುಹಿಸಿದ್ದಕ್ಕೆ ನಮಗೆ ಉತ್ತರ ಬರಬಹುದೆಂದು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ಪ್ರತಾಪ್ ಯಾದವ್.

ಕೊನೆಗೆ ಪ್ರಧಾನಿ ಕಚೇರಿಯ ಆದೇಶದಂತೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ರೂಬಿ ಹಾಲ್ ಕ್ಲಿನಿಕ್ ನಲ್ಲಿ ಉಚಿತವಾಗಿ ಕಳೆದ ವಾರ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು ಎನ್ನುತ್ತಾರೆ ಪ್ರತಾಪ್ ಯಾದವ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com