ಐಎನ್ ಎಸ್ ವಿಕ್ರಮಾದಿತ್ಯ, ವಿಕ್ರಾಂತ್ ಮೇಲೆ ಚೀನಾ ಹ್ಯಾಕರ್ ಗಳಿಂದ ಬೇಹುಗಾರಿಕೆ!

ಚೀನಾ ಹ್ಯಾಕರ್ ಗಳು ಐಎನ್ ಎಸ್ ವಿಕ್ರಾಂತ್ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ ಕುರಿತು ಮಾಹಿತಿ ಸಂಗ್ರಹಿಸಲು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಸಿದ್ದಾರೆ.
ಐಎನ್ ಎಸ್ ವಿಕ್ರಮಾದಿತ್ಯ, ವಿಕ್ರಾಂತ್ ಮೇಲೆ ಚೀನಾ ಹ್ಯಾಕರ್ ಗಳಿಂದ ಬೇಹುಗಾರಿಕೆ!

ನವದೆಹಲಿ: ಭಾರತ ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಇರುವಿಕೆಯನ್ನು ಹೆಚ್ಚಿಸುತ್ತಿದ್ದಂತೆಯೇ ಚೀನಾ ಹ್ಯಾಕರ್ ಗಳು ಐಎನ್ ಎಸ್ ವಿಕ್ರಾಂತ್ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ ಕುರಿತು ಮಾಹಿತಿ ಸಂಗ್ರಹಿಸಲು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಐಎನ್ಎಸ್ ವಿಕ್ರಾಂತ್, ವಿಕ್ರಮಾದಿತ್ಯ ಯುದ್ಧನೊಉಕೆಗಳ ಚಲನವಲನಗಳ ಬಗ್ಗೆ ಚೀನಾ ಹ್ಯಾಕರ್ ಗಳು ನಿಗಾ ಇಟ್ಟಿದ್ದಾರೆ, ಅಷ್ಟೇ ಅಲ್ಲದೇ ಭಾರತದ ಮಿಲಿಟರಿ ಸನ್ನದ್ಧತೆ ಕುರಿತ ಗೌಪ್ಯ ಮಾಹಿತಿಗಳನ್ನು ಹೊಂದಿರುವ ಸೈಬರ್ ಸೆಕ್ಯುರಿಟಿ ಕೋಡ್ ಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.  ಕೇವಲ ಯುದ್ಧ ನೌಕೆಗಳಷ್ಟೇ ಅಲ್ಲದೆ ಟಿಬೆಟ್ ನಿಂದ ಗಡಿಪಾರಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಗುಂಪಿನ ಮೇಲೆಯೂ ಚೀನಾ ಗೂಢಾಚಾರಿಕೆ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಚೀನಾದ ವಿರುದ್ಧ ಈ ಹಿಂದೆಯೂ ಟಿಬೆಟ್ ನಿಂದ ಗಡಿಪಾರಾಗಿರುವ ಗುಂಪಿನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪವಿದ್ದರೂ ಚೀನಾ ಮಾತ್ರ ಅದನ್ನು ನಿರಾಕರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com