ಬೆಂಗಳೂರು ಘಟನೆ ನೆನಪಿಸಿದ ಜೋಧ್​ಪುರ ಎಟಿಎಂ ದಾಳಿ

ಬೆಂಗಳೂರಿನ ಕಾರ್ಪೊರೇಷನ್ ವೃತ್ತದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನೆನಪಿಸುವಂತಹ....
ಹಲ್ಲೆಗೊಳಗಾದ ವ್ಯಕ್ತಿ
ಹಲ್ಲೆಗೊಳಗಾದ ವ್ಯಕ್ತಿ
ಜೋಧ್​ಪುರ: ಬೆಂಗಳೂರಿನ ಕಾರ್ಪೊರೇಷನ್ ವೃತ್ತದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನೆನಪಿಸುವಂತಹ ಘಟನೆಯೊಂದು ಜೋಧ್​ಪುರದಲ್ಲಿ ಜೂನ್ 1ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
ಜೋಧ್ ಪುರದ ಎಟಿಎಂವೊಂದಕ್ಕೆ ಎಂಟ್ರಿಕೊಟ್ಟ ದುಷ್ಕರ್ಮಿಯೊಬ್ಬ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಗೆ ನಾಲ್ಕು ಬಾರಿ ಚೂರಿಯಿಂದ ಇರಿದು ಹಣ ದೋಚಲು ಯತ್ನಿಸಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಲ್ಲೆಗೊಳಗಾಗಿದ್ದ ವ್ಯಕ್ತಿ ನೀಡಿದ ಮಾಹಿತಿ ಆಧರಿಸಿ ಕಾರ್ಯಚಾರಣೆ ನಡೆಸಿದ ಪೊಲೀಸರು, ಕಡೆಗೂ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಮಾರಾಣಾಂತಿಕ ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿದ ವ್ಯಕ್ತಿ ನವೀನ್ ಪರಿಹಾರ್ ಎಂದು ಗುರುತಿಸಲಾಗಿದ್ದು, ಆರೋಪಿ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ‘ಹಣ ಇಲ್ಲದೇ ಸಾಕಷ್ಟು ಹತಾಶನಾಗಿದ್ದೆ. ಆಗ ಇದೊಂದೆ ಮಾರ್ಗ ನನಗೆ ಕಾಣಿಸಿದ್ದು. ಹಣಕ್ಕಾಗಿ ಹೀಗೆ ಮಾಡಿದ್ದೇನೆ’ ಎಂದು ಪೊಲೀಸರಿಗೆ ಬಾಯಿಬಿಟ್ಟಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಹಣ ಸಂಪಾದನೆಗೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳಬೇಕೆಂದು, ಅಂತಿಮವಾಗಿ ಈ ದಾರಿ ಹಿಡಿದಿದ್ದಾನೆ ಎಂದು ತಿಳಿಸಿದ್ದಾರೆ.
ಚೂರಿ ಇರಿತಕ್ಕೊಳಗಾದ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com