ದಾದ್ರಿ ಪ್ರಕರಣ: ಅಖ್ಲಾಕ್ ಕುಟುಂಬಸ್ಥರ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ಗ್ರಾಮಸ್ಥರು

ದೇಶದಾದ್ಯಂತ ಭಾರೀ ಸುದ್ದಿ ಮಾಡಿದ್ದ ದಾದ್ರಿ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೃತ ಅಖ್ಲಾಕ್ ಕುಟುಂಬ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಗ್ರಾಮಸ್ಥರು...
ಅಖ್ಲಾಕ್ ಸಾವಿನ ನಂತರ ದುಃಖದಲ್ಲಿರುವ ಕುಟುಂಬಸ್ಥರು
ಅಖ್ಲಾಕ್ ಸಾವಿನ ನಂತರ ದುಃಖದಲ್ಲಿರುವ ಕುಟುಂಬಸ್ಥರು

ಗ್ರೇಟರ್ ನೊಯ್ಡಾ: ದೇಶದಾದ್ಯಂತ ಭಾರೀ ಸುದ್ದಿ ಮಾಡಿದ್ದ ದಾದ್ರಿ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೃತ ಅಖ್ಲಾಕ್ ಕುಟುಂಬ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಗ್ರಾಮಸ್ಥರು ಗುರುವಾರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬಿಶಾಡಾ ಗ್ರಾಮಸ್ಥರು ಗೌತಮ್ ಬುದ್ಧ್ ನಗರದಲ್ಲಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರನ್ನು ಭೇಟಿಯಾಗಿದ್ದರು. ಈ ವೇಳೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದು, ಭಾರತೀಯ ದಂಹಿತೆ ಸೆಕ್ಷನ್ 156 (3)ರ ಆಡಿಯಲ್ಲಿ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆಂದು ಹಿರಿಯ ಅಭಿಯೋಜಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತ ವಿಚಾರಣೆ ನ್ಯಾಯಾಲಯದಲ್ಲಿ ಜೂನ್. 13 ರಂದೆ ನಡೆಯಲಿದೆ. ಅಖ್ಲಾಕ್ ಕುಟುಂಬಸ್ಥರಿಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡಲಾಗಿದೆ. ಪ್ರತಿಕ್ರಿಯೆ ಹಾಗೂ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com