ಮಥುರಾ ಗಲಭೆ: ಮೃತ ಪೊಲೀಸ್ ವರಿಷ್ಠಾಧಿಕಾರಿ ಪತ್ನಿಗೆ ಗೆಜೆಟೆಡ್ ಆಫೀಸರ್ ಹುದ್ದೆ

ಮಥುರಾ ಗಲಭೆಯಲ್ಲಿ ಮೃತಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ಅವರ ಪತ್ನಿಗೆ ಉತ್ತರ ಪ್ರದೇಶ ಸರ್ಕಾರ ಗೆಜೆಟೆಡ್ ಆಫೀಸರ್ ಹುದ್ದೆ ನೀಡಿದೆ.
ಪತ್ನಿಯೊಂದಿಗೆ ಮುಕುಲ್ ದ್ವಿವೇದಿ
ಪತ್ನಿಯೊಂದಿಗೆ ಮುಕುಲ್ ದ್ವಿವೇದಿ
Updated on: 
ಲಖನೌ: ಮಥುರಾ ಗಲಭೆಯಲ್ಲಿ ಮೃತಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ಅವರ ಪತ್ನಿಗೆ ಉತ್ತರ ಪ್ರದೇಶ ಸರ್ಕಾರ ಗೆಜೆಟೆಡ್ ಆಫೀಸರ್ ಹುದ್ದೆ ನೀಡಿದೆ.
ಮುಕುಲ್ ದ್ವಿವೇದಿ ಅವರ ಪತ್ನಿ ಅರ್ಚನಾ ದ್ವಿವೇದಿ ಅವರಿಗೆ ಗೆಜೆಟೆಡ್ ಆಫೀಸರ್ ಹುದ್ದೆ ನೀಡುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 
ಕಳೆದ ವಾರ 'ಆಜಾದ್ ಭಾರತ ವಿಧಿಕ್ ವೈಚಾರಿಕ ಕ್ರಾಂತಿ ಸತ್ಯಾಗ್ರಹಿ’ಸದಸ್ಯರು ಮಥುರಾದ ಜವಾಹರ್​ಬಾಗ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಗುಂಪು ಚದುರಿಸಲು ಪೊಲೀಸರು ಯತ್ನಿಸಿದಾಗ ಉದ್ರಿಕ್ತ ಜನರು ತುಪಾಕಿಯಿಂದ ಗುಂಡಿನ ದಾಳಿ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ಸಹಿತ ಹಲವರು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com