ಪ್ರಣಬ್ ಮುಖರ್ಜಿ 3 ರಾಷ್ಟ್ರಗಳ ಆಫ್ರಿಕಾ ಪ್ರವಾಸ ಆರಂಭ

ಆಫ್ರಿಕಾ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೈಗೊಂಡಿರುವ ಆಫ್ರಿಕಾದ ಮೂರು ರಾಷ್ಟ್ರಗಳ ಪ್ರವಾಸ ಭಾನುವಾರ...
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ನವದೆಹಲಿ: ಆಫ್ರಿಕಾ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೈಗೊಂಡಿರುವ ಆಫ್ರಿಕಾದ ಮೂರು ರಾಷ್ಟ್ರಗಳ ಪ್ರವಾಸ ಭಾನುವಾರ ಆರಂಭಗೊಂಡಿದೆ.

ಪ್ರಣಬ್ ಮುಖರ್ಜಿಯವರು ಆಫ್ರಿಕಾದ ಮೂರು ರಾಷ್ಟ್ರಗಳಾದ ಘಾನಾ, ಕೋಟ್ ಡಿ ಐವರಿ ಹಾಗೂ ನಮೀಬಿಯಾ ಪ್ರವಾಸ ಕೈಗೊಂಡಿದ್ದಾರೆ. 6 ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಣಬ್ ಮುಖರ್ಜಿಯವರೊಂದಿಗೆ ಓರ್ವ ರಾಜ್ಯ ಸಚಿವ, ನಾಲ್ವರು ಸಂಸತ್ ಸದಸ್ಯರು ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳು ಜೊತೆಗೂಡಿದ್ದಾರೆ.

ಮೊದಲು ಪ್ರಣಬ್ ಮುಖರ್ಜಿಯವರು ಘಾನಾಕ್ಕೆ ತೆರಳಲಿದ್ದು, ಪ್ರಣಬ್ ಅವರನ್ನು ರಿಪಬ್ಲಿಕ್ ಆಫ್ ಘಾನಾದ ಉಪರಾಷ್ಟ್ರಪತಿ ಕ್ವೇಸಿ ಬೆಕೋ ಅಮ್ಮಿಸ್ಸಾ-ಅರ್ಥರ್ ಅವರು ಸ್ವಾಗತಿಸಲಿದ್ದಾರೆ. ಮೂರು ರಾಷ್ಟ್ರಗಳ ಭೇಟಿ ವೇಳೆ ಆಫ್ರಿಕಾದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿರುವ ಪ್ರಣಬ್ ಮುಖರ್ಜಿಯವರು ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಘಾನಾಗೆ ಭೇಟಿ ನೀಡಿದ ನಂತರ ಘಾನಾ ವಿಶ್ವವಿದ್ಯಾಲಯದ ಜಂಟಿ ಉದ್ದಿಮೆಗಳ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ನಂತರ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಕೊಡುಗೆಯಾಗಿ ನೀಡಿದ ಮಹಾತ್ಮಾ ಗಾಂಧಿಯವರ ಮೂರ್ತಿಯನ್ನು ಅನಾವರಣ ಮಾಡಲಿದ್ದಾರೆ.

ಜೂ.14 ರಂದು ಕೋಟ್ ಡಿ ಐವರಿ ಹಾಗೂ ಜೂ.15 ರಂದು ನಮೀಬಿಯಾಗೆ ತೆರಳಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com