ಸೈನಿಕ ಕಾಲೋನಿ ವಿಚಾರ: ಗಿಲಾನಿ, ಫರೂಕ್'ಗೆ ಗೃಹ ಬಂಧನ

ಜಮ್ಮು-ಕಾಶ್ಮೀರದ ಸೈನಿಕ ಕಾಲೋನಿ ವಿಚಾರಕ್ಕೆ ಸಂಬಂಧಿಸಿ ಸಭೆ ನಡೆಸಲು ತೀರ್ಮಾನಿಸಿದ್ದ ಪ್ರತ್ಯೇಕತಾವಾದಿ ನಾಯಕರಾದ ಸಯ್ಯೀದ್ ಅಲಿ ಶಾ ಗಿಲಾನಿ ಹಾಗೂ ಮಿರ್ವೈಜ್ ಉಮರ್ ಫರೂಕ್...
ಸಯ್ಯೀದ್ ಅಲಿ ಶಾ ಗಿಲಾನಿ
ಸಯ್ಯೀದ್ ಅಲಿ ಶಾ ಗಿಲಾನಿ

ಶ್ರೀನಗರ: ಜಮ್ಮು-ಕಾಶ್ಮೀರದ ಸೈನಿಕ ಕಾಲೋನಿ ವಿಚಾರಕ್ಕೆ ಸಂಬಂಧಿಸಿ ಸಭೆ ನಡೆಸಲು ತೀರ್ಮಾನಿಸಿದ್ದ ಪ್ರತ್ಯೇಕತಾವಾದಿ ನಾಯಕರಾದ ಸಯ್ಯೀದ್ ಅಲಿ ಶಾ ಗಿಲಾನಿ ಹಾಗೂ ಮಿರ್ವೈಜ್ ಉಮರ್ ಫರೂಕ್ ಅವರನ್ನು ಭಾನುವಾರ ಗೃಹ ಬಂಧನದಲ್ಲಿರಿಸಲಾಗಿದೆ.

ಜಮ್ಮು ಕಾಶ್ಮೀರ ಸರ್ಕಾರ ಸೈನಿಕ ದಳ ಹಾಗೂ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕವಾಗಿ ಕಾಲೋನಿಯೊಂದನ್ನು ನಿರ್ಮಿಸಲು ಈ ಹಿಂದೆ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಹುರಿಯತ್ ಕಾನ್ಫರೆನ್ಸ್ ಮತ್ತು ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್ ಗಳು ಜಂಟಿಯಾಗಿ ಸರ್ಕಾರದ ನಿರ್ಧಾರ ವಿರುದ್ಧ ನಿಲ್ಲಲು ಸಭೆ ನಡೆಸಲು ತೀರ್ಮಾನಿಸಿತ್ತು.

ಹೀಗಾಗಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತುಕೊಂಡಿರುವ ಜಮ್ಮ ಕಾಶ್ಮೀರ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕತಾವಾದಿಗಳಾದ ಗಿಲಾನಿ, ಮಿರ್ವೈಜ್ ಉಮರ್ ಫರೂಕ್ ಹಾಗೂ ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಅವರಿಗೆ ಗೃಹ ಬಂಧನದಲ್ಲಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com