ಪರಿಣಾಮಕಾರಿ ಸಿನಿಮಾ 'ಉಡ್ತಾ ಪಂಜಾಬ್'ನ್ನು ಬಾದಲ್ ನೋಡಲೇಬೇಕು: ಕೇಜ್ರಿವಾಲ್

ಉಡ್ತಾ ಪಂಜಾಬ್ ಚಿತ್ರ ಪರಿಣಾಮಕಾರಿ ಸಿನಿಮಾವಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಸಿನಿಮಾ ನೋಡಲೇಬೇಕು ಎಂದು ದೆಹಲಿ ಮುಖ್ಯಮಂತ್ರಿ...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ನವದೆಹಲಿ: ಉಡ್ತಾ ಪಂಜಾಬ್ ಚಿತ್ರ ಪರಿಣಾಮಕಾರಿ ಸಿನಿಮಾವಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಸಿನಿಮಾ ನೋಡಲೇಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.,

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈಗಷ್ಟೇ ಉಡ್ತಾ ಪಂಜಾಬ್ ಚಿತ್ರವನ್ನು ನೋಡಿದೆ. ಚಿತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಚಿತ್ರ ನೋಡುವ ಮೂಲಕ ಪಂಜಾಬ್ ನಲ್ಲಿ ತಾವು ಏನು ಮಾಡಿದ್ದೀರಿ ಎಂಬುದನ್ನು ಬಾದಲ್ ಅವರು ನೋಡಬೇಕು ಎಂದು ಹೇಳಿದ್ದಾರೆ.

ಪಂಜಾಬ್ ನಲ್ಲಿ ಪರಿಸ್ಥಿತಿ ಹಾಳಾಗಿದ್ದು, ರಾಜಕಾರಣಿಗಳೇ ಮಾದಕ ವಸ್ತುಗಳ ಮಾರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಉಡ್ತಾ ಪಂಜಾಬ್ ಚಿತ್ರ ಪರಿಣಾಮಕಾರಿ ಸಿನಿಮಾವಾಗಿದೆ ಎಂದು ಹೇಳಿದ್ದಾರೆ.

ನೈಜ ಕಥೆಯಾಧರಿಸಿ ಸಿನಿಮಾ ನಿರ್ದೇಶಿಸಿದ್ದ ಅನುರಾಗ್ ಕಶ್ಯಪ್ ಅವರಿಗೆ ಸೆನ್ಸಾರ್ ಮಂಡಳಿ ಆಘಾತ ನೀಡಿತ್ತು. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರದ 89 ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ 89 ಕಟ್ ಗಳ ವಿರುದ್ಧ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೂ.13ರಂದು ಅಂತಿಮ ತೀರ್ಪು ಪ್ರಕಟಿಸಿ, ಕೇವಲ 1 ದೃಶ್ಯಕ್ಕೆ ಮಾತ್ರ ಕತ್ತರಿ ಹಾಕುವಂತೆ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com