6.5 ಲಕ್ಷ ಟನ್ ಬೇಳೆ-ಕಾಳು ಆಮದಿಗೆ ಕೇಂದ್ರ ಸೂಚನೆ

ಅಗತ್ಯ ಬೇಡಿಕೆ ಪೂರೈಸಲಾಗದೇ ದಿನೇ ದಿನೇ ಏರುತ್ತಿರುವ ಬೇಳೆ-ಕಾಳುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಧಾನ್ಯಗಳ ಆಮದಿಗೆ ಮುಂದಾಗಿದೆ...
ಭಾರಿ ಪ್ರಮಾಣದಲ್ಲಿ ಆಹಾರ ಧಾನನ್ಯಗಳ ಆಮದು (ಸಂಗ್ರಹ ಚಿತ್ರ)
ಭಾರಿ ಪ್ರಮಾಣದಲ್ಲಿ ಆಹಾರ ಧಾನನ್ಯಗಳ ಆಮದು (ಸಂಗ್ರಹ ಚಿತ್ರ)

ನವದೆಹಲಿ: ಅಗತ್ಯ ಬೇಡಿಕೆ ಪೂರೈಸಲಾಗದೇ ದಿನೇ ದಿನೇ ಏರುತ್ತಿರುವ ಬೇಳೆ-ಕಾಳುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಇತಿಹಾಸದಲ್ಲಿಯೇ  ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಧಾನ್ಯಗಳ ಆಮದಿಗೆ ಮುಂದಾಗಿದೆ.

ಬೆಲೆ ನಿಯ೦ತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 6.5 ಲಕ್ಷ ಟನ್ ಧಾನ್ಯ ಆಮದು ಮಾಡಿಕೊಳ್ಳಲು ನಿಧ೯ರಿಸಿದ್ದು, ಭಾರತ ಇಷ್ಟು ದೊಡ್ಡ ಪ್ರಮಾಣದಲ್ಲಿ ಧಾನ್ಯಗಳನ್ನು ಆಮದು  ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಅಲ್ಲದೇ ವಿವಿಧ ಪದಾಥ೯ಗಳ ದರ ಏರಿಕೆ ನಿಯ೦ತ್ರಿಸಲು ತ್ವರಿತ ಕ್ರಮಗಳನ್ನು ಕೈಗೊ೦ಡಿರುವ ಕೇಂದ್ರ, ಸಕ್ಕರೆ ಬೆಲೆ ಹತೋಟಿಗೆ  ತರಲು ಶೇ. 20 ರಫ್ತು ತೆರಿಗೆ ವಿಧಿಸಲಾಗುವುದು ಮತ್ತು ಭಾರತದಿ೦ದ ಹೊರ ದೇಶಗಳಿಗೆ ರಫ್ತಾಗುವ ಕಚ್ಚಾ, ಬಿಳಿ ಹಾಗೂ ರಿಫೈನ್ಡ್ ಸಕ್ಕರೆಗಳಿಗೆ ತೆರಿಗೆ ಅನ್ವಯವಾಗಲಿದೆ ಎಂದು ಸರ್ಕಾರ  ತಿಳಿಸಿದೆ.

ಇನ್ನು ಗೋಧಿಯ ಮೇಲೆ ಹೇರಲಾಗಿರುವ ಶೇ. 25 ಆಮದು ತೆರಿಗೆ ಯಥಾಸ್ಥಿತಿಯಲ್ಲಿ ಮು೦ದುವರಿಯಲಿದ್ದು, ಧಾನ್ಯಗಳು ಪ್ರತಿ ಕೆಜಿಗೆ 120 ರು.ಗಿ೦ತ ಹೆಚ್ಚಿನ ದರದಲ್ಲಿ ಮಾರಾಟವಾಗದ೦ತೆ  ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ೦ತೆ ಕೇ೦ದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ಎಲ್ಲ ರಾಜ್ಯ ಸಕಾ೯ರಗಳಿಗೆ ಸೂಚಿಸಿದೆ. ವಿದೇಶಗಳಿ೦ದ ಆಮದಾಗುವ ಧಾನ್ಯಗಳ  ಪ್ರಮಾಣದ ಮೇಲೆ ನಿಗಾ ಇಡುವ೦ತೆ ಬ೦ದರು ಸಚಿವಾಲಯಕ್ಕೂ ಸೂಚಿಸಲಾಗಿದ್ದು, ಧಾನ್ಯಗಳನ್ನು ಖರೀದಿಸಿ, ಕಡಿಮೆ ದರದಲ್ಲಿ ಸಾವ೯ಜನಿಕರಿಗೆ ವಿತರಿಸಲು ರಾಜ್ಯ ಸಕಾ೯ರಕ್ಕೆ ಸಾಕಷ್ಟು  ಅನುದಾನಗಳನ್ನೂ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ತರಕಾರಿ ಬೆಲೆಗಳ ನಿಯ೦ತ್ರಣಕ್ಕೆ ಕ್ರಮ ಕೈಗೊಳ್ಳುವ೦ತೆಯೂ ರಾಜ್ಯಗಳಿಗೆ ಸೂಚಿಸಲಾಗಿದ್ದು, ಸದ್ಯದಲ್ಲೇ ಮ್ಯಾನ್ಮಾರ್ ಹಾಗೂ ಮೊಜಾ೦ಬಿಕ್‍ಗೆ ನಿಯೋಗ ಕರೆದೊಯ್ದು, ದೀಘಾ೯ವಧಿಯಲ್ಲಿ  ಹೆಚ್ಚಿನ ಧಾನ್ಯ ಪೂರೈಕೆ ಕುರಿತು ಒಪ್ಪ೦ದ ಮಾಡಿಕೊಳ್ಳಲಾಗುವುದು ಎ೦ದು ಗ್ರಾಹಕರ ವ್ಯವಹಾರಗಳ ಸಚಿವಾಲಯ ಕಾಯ೯ದಶಿ೯ ಹೇಮ್ ಪಾ೦ಡೆ ಮಾಹಿತಿ ನೀಡಿದ್ದಾರೆ.

ರಿಯಾಯಿತಿಯಲ್ಲಿ ಮಾರಾಟ
ದೆಹಲಿ, ಮು೦ಬೈನ೦ಥ ಪಟ್ಟಣಗಳಲ್ಲಿ ಧಾನ್ಯಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲು ಕೇ೦ದ್ರ ಸಕಾ೯ರ ಮು೦ದಾಗಿದೆದ್ದು, ಈಗಾಲೇ ದೆಹಲಿಯಲ್ಲಿ ಮೊಬೈಲ್ ವ್ಯಾನ್‍ಗಳ ಮೂಲಕ  ಧಾನ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಮು೦ಬೈನಲ್ಲೂ ಇದೇ ಮಾದರಿ ಅನುಸರಿಸುವ೦ತೆ ಮಹಾರಾಷ್ಟ್ರ ಸಕಾ೯ರಕ್ಕೆ ಸೂಚಿಸಲಾಗಿದೆ. ಅಂತೆಯೇ  ಪ್ರಸ್ತುತ ಕೇ೦ದ್ರದ ಬಳಿ 48 ಸಾವಿರ ಟನ್ ಧಾನ್ಯಗಳ ದಾಸ್ತಾನು ಇದ್ದು, ಇವುಗಳನ್ನು ರಿಯಾಯಿತಿ ದರದಲ್ಲಿ ಜನರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎ೦ದು ಕೇ೦ದ್ರ ಆಹಾರ  ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com