ನಿಫ್ಟ್ ಮುಖ್ಯಸ್ಥರಾಗಿ ಚೇತನ್ ಚೌಹಾಣ್ ನೇಮಕ

ಮಾಜಿ ಟೆಸ್ಟ್‌ ಕ್ರಿಕೆಟರ್‌ ಮತ್ತು ಮಾಜಿ ಬಿಜೆಪಿ ಸಂಸದ ಚೇತನ್‌ ಚೌಹಾಣ್‌ ಅವರನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯ..
ಚೇತನ್ ಚೌಹಾಣ್
ಚೇತನ್ ಚೌಹಾಣ್

ನವದೆಹಲಿ: ಮಾಜಿ ಟೆಸ್ಟ್‌ ಕ್ರಿಕೆಟರ್‌ ಮತ್ತು ಮಾಜಿ ಬಿಜೆಪಿ ಸಂಸದ ಚೇತನ್‌ ಚೌಹಾಣ್‌ ಅವರನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯ (ನಿಫ್ಟ್‌) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಚೇತನ್‌ ಚೌಹಾಣ್‌  ನೇಮಕಕ್ಕೆ ಅಮ್‌ ಆದ್ಮಿ ಪಕ್ಷದಿಂದ  ಟೀಕೆ ವ್ಯಕ್ತವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಚೌಹಾಣ್‌ ನೇಮಕವನ್ನು ಪ್ರಶ್ನೆ ಮಾಡಿದ್ದು, ಮೋದಿ ನೇತೃತ್ವದ ಸರ್ಕಾರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೊಗಳುಭಟ್ಟರನ್ನು ನೇಮಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಗಜೇಂದ್ರ ಚೌಹಾಣ್‌, ಚೇತನ್‌ ಚೌಹಾಣ್‌, ಪಹ್ಲಜ್‌ ನಿಹಲಾನಿ, ಸ್ಮೃತಿ ಇರಾನಿ... ಇಂತಹ ಆಯ್ದ    ವ್ಯಕ್ತಿಗಳನ್ನೇ ನೇಮಿಸುತ್ತಿದ್ದಾರೆ’ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ನೇಮಕದ ಕುರಿತು ಪ್ರತಿಕ್ರಿಯಿಸಿರುವ ಚೌಹಾನ್‌, ‘ಕೇಂದ್ರ ಸರ್ಕಾರ ನನ್ನನ್ನು ನಿಫ್ಟ್‌ ಮುಖ್ಯಸ್ಥನನ್ನಾಗಿ ನೇಮಕ ಮಾಡಿದೆ. ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com