• Tag results for ನೇಮಕ

ಬಿಸಿಸಿಐ ಕೋವಿಡ್-19 ಟಾಸ್ಕ್ ಪೋರ್ಸ್ ಗೆ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋವಿಡ್ -19 ಒಳಗೊಂಡ ಕಾರ್ಯಪಡೆ ರಚಿಸಲಿದ್ದು, ಇದರಲ್ಲಿ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಕೂಡ ಸೇರಿದ್ದಾರೆ.

published on : 4th August 2020

ಅತೃಪ್ತಿ ಶಮನಕ್ಕೆ ಯತ್ನ: ಸಚಿವಕಾಂಕ್ಷಿಗಳಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ; 4 ಶಾಸಕರಿಂದ ರಿಜೆಕ್ಟ್

ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ.

published on : 28th July 2020

ರಾಯಚೂರು, ಬೆಂಗಳೂರು, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಪ್ರಗತಿಪರ ರೈತರ ನೇಮಕ

ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರ ರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯ ಈ ನೇಮಕಾತಿಯಾಗಿದೆ. 

published on : 24th July 2020

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ವೇದ ಬ್ರಹ್ಮ ಡಾ. ರಾಘವೇಂದ್ರ ಭಟ್ ನೇಮಕ

ವೇದ ಬ್ರಹ್ಮ ವಿದ್ವಾನ್ ಡಾ. ರಾಘವೇಂದ್ರ ಭಟ್ ಅವರನ್ನು ಕರ್ನಾಟಕ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ನಿರ್ದೇಶಕರು ಮತ್ತು ವಿಶೇಷ ಆಹ್ವಾನಿತರನ್ನಾಗಿ ಸರ್ಕಾರ ನೇಮಿಸಿದೆ.

published on : 23rd July 2020

ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರವಿ ಮಳಿಮಠ್‌ ನೇಮಕ

ಉತ್ತರಾಖಂಡ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ರವಿ ವಿಜಯ್‌ಕುಮಾರ್‌ ಮಳಿಮಠ್‌ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. 

published on : 17th July 2020

ಸಶಸ್ತ್ರ ಪೊಲೀಸ್ ಪಡೆಗಳಿಗೆ ಶೀಘ್ರವೇ ತೃತೀಯಲಿಂಗಿಗಳ ನೇಮಕಕ್ಕೆ ಅವಕಾಶ!?

ತೃತೀಯ ಲಿಂಗಿಗಳಿಗೆ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಶೀಘ್ರವೇ ಕಾರ್ಯಸಾಧು ಆಗುವ ಸಾಧ್ಯತೆ ಇದೆ.

published on : 2nd July 2020

ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ತಾಂತ್ರಿಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ನಿಯೋಜನೆಗೆ ಆದೇಶ ಹೊರಡಿಸಿರುವುದಾಗಿ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್‌ನಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು, ಜನತೆ ಈ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ಹೇಳಿದ್ದಾರೆ. 

published on : 30th June 2020

ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

published on : 20th June 2020

ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಆದೇಶ

ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಬುಧವಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

published on : 17th June 2020

ಗ್ರಾಮ ಪಂಚಾಯಿತಿ ಚುನಾವಣೆವರೆಗೂ ಆಡಳಿತಾಧಿಕಾರಿ ನೇಮಕ: ಸಚಿವ ಮಾಧುಸ್ವಾಮಿ

ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಅಲ್ಲಿಯವರೆಗೆ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಗುರುವಾರ ಹೇಳಿದ್ದಾರೆ.

published on : 11th June 2020

ಲಾಕ್ ಡೌನ್ ಹಿನ್ನೆಲೆ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಸ್ಥಗಿತ

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

published on : 31st May 2020

ಖಾಲಿ ಉಳಿದಿವೆ ಪ್ರಮುಖ ಹುದ್ದೆಗಳು: ಪದಾಧಿಕಾರಿಗಳ ನೇಮಕದ ಬಗ್ಗೆ ಕಾಂಗ್ರೆಸ್-ಬಿಜೆಪಿ ದಿವ್ಯ ನಿರ್ಲಕ್ಷ್ಯ!

ಕೊರೋನಾ  ಸಾಂಕ್ರಾಮಿಕ ರೋಗ ಕರ್ನಾಟಕದ ಎರಡು ಬಹುದೊಡ್ಡ ಪಕ್ಷಗಳಿಗೆ ಅನಿರೀಕ್ಷಿತ ಸಮಸ್ಯೆಗಳನ್ನು ತಂದೊಡ್ಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ,

published on : 29th May 2020

ಮೈಸೂರು ಹಾಲು ಒಕ್ಕೂಟದಲ್ಲಿ ಅಕ್ರಮ ನೇಮಕಾತಿ, ಮ್ಯಾಚ್ ಫಿಕ್ಸಿಂಗ್: ಸಾ.ರಾ. ಮಹೇಶ್ ಆರೋಪ

ಮೈಸೂರು ಹಾಲು ಒಕ್ಕೂಟದಲ್ಲಿ (ಮೈಮುಲ್ನಲ್ಲಿ) ನಿಯಮ ಗಾಳಿಗೆ ತೂರಿ ಅಕ್ರಮ ನೇಮಕಾತಿ, ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ, ಸರ್ಕಾರ ಕೂಡಲೇ ಇದಕ್ಕೆ ತಡೆ ನೀಡಿ, ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.

published on : 12th May 2020

ಕೋವಿಡ್-19: ಗೂಗಲ್ ನಲ್ಲಿ ಹೊಸ ನೇಮಕಾತಿಗಳಿಗೆ 1 ವರ್ಷ ತಡೆ: ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ! 

2019 ರಲ್ಲಿ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆ ಈ ವರ್ಷ ಅಷ್ಟೇ ಸಂಖ್ಯೆಯ ನೇಮಕಾತಿಗೆ ಯೋಜನೆ ರೂಪಿಸಿತ್ತು. ಆದರೆ ಕೊರೋನಾ ಪರಿಣಾಮ ಬರೊಬ್ಬರಿ ಒಂದು ವರ್ಷಗಳ ಕಾಲ ಹೊಸ ನೇಮಕಾತಿಗಳಿಗೆ ಗೂಗಲ್ ಬ್ರೇಕ್ ಹಾಕಿದೆ.  

published on : 16th April 2020
1 2 3 4 5 >