ರಾಜ್ಯದಿಂದ ಇದೇ ಮೊದಲು: ವಿಧಾನಸಭಾ ಸ್ಪೀಕರ್ ಗಳ ರಾಷ್ಟ್ರೀಯ ಸಮಿತಿಗೆ ಯು.ಟಿ ಖಾದರ್ ನೇಮಕ!

ದೇಶಾದ್ಯಂತ ಕೇವಲ ನಾಲ್ಕು ವಿಧಾನಸಭಾ ಸ್ಪೀಕರ್‌ಗಳನ್ನು ಒಳಗೊಂಡ ಸಮಿತಿಗೆ ಯು. ಟಿ.ಖಾದರ್ ಅವರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆದೇಶ ಹೊರಡಿಸಿದ್ದಾರೆ.
Speaker U T Khader
ಸ್ಪೀಕರ್ ಯು.ಟಿ. ಖಾದರ್
Updated on

ಮಂಗಳೂರು: ಸಂವಿಧಾನದ ಹತ್ತನೇ ಅನುಸೂಚಿಯಡಿ ಸಭಾಧ್ಯಕ್ಷರ ಅಧಿಕಾರ ಮತ್ತು ನಿಯಮಗಳನ್ನು ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರನ್ನು ನೇಮಕ ಮಾಡಲಾಗಿದೆ.

ದೇಶಾದ್ಯಂತ ಕೇವಲ ನಾಲ್ಕು ವಿಧಾನಸಭಾ ಸ್ಪೀಕರ್‌ಗಳನ್ನು ಒಳಗೊಂಡ ಸಮಿತಿಗೆ ಯು.ಟಿ.ಖಾದರ್ ಅವರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆದೇಶ ಹೊರಡಿಸಿದ್ದಾರೆ.

ಈ ನೇಮಕ ಮಹತ್ವದು ಎಂದು ಪರಿಗಣಿಸಲಾಗಿದೆ. ಮಹಾರಾಷ್ಟ್ರದ ಸ್ಪೀಕರ್ ರಾಹುಲ್ ನಾರ್ವೇಕರ್ ಸಮಿತಿಯ ಅಧ್ಯಕ್ಷರಾಗಿದ್ದು, ಒಡಿಶಾ ಸ್ಪೀಕರ್ ಸುರಮ ಪಾದಿ, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ , ನಾಗಲ್ಯಾಂಡ್ ಸ್ಪೀಕರ್ ಷರಿಂಗೈನ್ ಲಾಂಗ್ ಕುಮೆರ್ ಸಮಿತಿಯ ಸದಸ್ಯರಾಗಿದ್ದಾರೆ.

ರಾಜ್ಯ ವಿಧಾನಸಭೆಗಳಲ್ಲಿ ಶಿಸ್ತು ಸುಧಾರಿಸಲು ಮತ್ತು ಸಂಸದೀಯ ನಿಯಮಗಳನ್ನು ಎತ್ತಿಹಿಡಿಯಲು ಸುಧಾರಣೆಗಳನ್ನು ಸಮಿತಿ ಪರಿಶೀಲಿಸುತ್ತಿದೆ. ದೇಶದ ರಾಜ್ಯ ವಿಧಾನಸಭೆಗಳ ಕಾರ್ಯ ಕಲಾಪಗಳಲ್ಲಿ ಅನೇಕ ಸುಧಾರಣೆಯಾಗಬೇಕಾಗಿದೆ.

ಅಶಿಸ್ತಿನ ನಡವಳಿಕೆ ತಡೆಯುವ ಕ್ರಮಗಳು, ಅಸಂಸದೀಯ ಭಾಷೆ ಬಳಕೆ ಸೇರಿದಂತೆ ಅನೇಕ ಬದಲಾವಣೆಗಳನ್ನು ತರಬೇಕಾಗಿದೆ ಎಂದು ಯು.ಟಿ. ಖಾದರ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ನೆನಪಿಸಿಕೊಂಡ ಖಾದರ್, "ನಾನು 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಬೇಕಾದದ್ದು ದುಃಖದ ದಿನವಾಗಿತ್ತು. ಆದರೆ ಸದನದ ಸೌಜನ್ಯಕ್ಕೆ ಧಕ್ಕೆ ಬಂದಾಗ ಸ್ಪೀಕರ್ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಖಾದರ್, ಜನಾದೇಶಕ್ಕೆ ವಿರುದ್ಧವಾಗಿ ಪಕ್ಷಾಂತರ ಸಮಸ್ಯೆಗೆ ಪರಿಹಾರ ಸಮಿತಿಯ ಪ್ರಮುಖ ಕಾಳಜಿಯಾಗಿದೆ ಎಂದರು.

Speaker U T Khader
ವಿಧಾನಸಭೆ ಗದ್ದಲ, ಸ್ಪೀಕರ್‌ಗೆ 'ಅಗೌರವ': 6 ತಿಂಗಳ ಕಾಲ 18 BJP ಶಾಸಕರು ಅಮಾನತು; ಯುಟಿ ಖಾದರ್ ಆದೇಶ

ರಾಜ್ಯ ವಿಧಾನಸಭೆಗಳಲ್ಲಿ ಸ್ಪೀಕರ್ ಅವರ ಅಧಿಕಾರ, ಜವಾಬ್ದಾರಿಗಳು ಮತ್ತು ಕಾರ್ಯವಿಧಾನದ ನಿಯಮಗಳನ್ನು ರಾಷ್ಟ್ರೀಯ ಸಮಿತಿಗೆ ಪರಿಶೀಲಿಸಲಿದ್ದು, ನಾಲ್ಕು ಬಾರಿ ಶಾಸಕರಾಗಿರುವ ಖಾದರ್ ಅವರು ಈ ರಾಷ್ಟ್ರೀಯ ಸಮಿತಿಗೆ ನಾಮನಿರ್ದೇಶನಗೊಂಡ ಕರ್ನಾಟಕದ ಮೊದಲ ಸ್ಪೀಕರ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com