ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಕಸ್ಟಮ್ಸ್ ಗೋದಾಮಿನಿಂದಲೇ ಚಿನ್ನ ಕಳವು, ಅಸಲಿ ಬದಲಿಗೆ ನಕಲಿ ಗಟ್ಟಿಗಳನ್ನಿಟ್ಟ ಕದೀಮರು

ದೆಹಲಿ ವಿಮಾನ ನಿಲ್ದಾಣದಲ್ಲಿ 27 ವರ್ಷಗಳ ಹಿಂದೆ ವಶ ಪಡಿಸಿಕೊಳ್ಳಲಾಗಿದ್ದ ಅಕ್ರಮ ಚಿನ್ನದ ಆಭರಣಗಳನ್ನು ಕಸ್ಟಮ್ಸ್​ನ ಗೋದಾಮಿನಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.
Published on

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ 27 ವರ್ಷಗಳ ಹಿಂದೆ ವಶ ಪಡಿಸಿಕೊಳ್ಳಲಾಗಿದ್ದ ಅಕ್ರಮ ಚಿನ್ನದ ಆಭರಣಗಳನ್ನು ಕಸ್ಟಮ್ಸ್​ನ ಗೋದಾಮಿನಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕಸ್ಟಮ್ಸ್ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಚಿನ್ನವನ್ನು ಇಲಾಖೆಯ ನಿಲ್ದಾಣದಲ್ಲಿರುವ ಗೋದಾಮಿನಲ್ಲಿರಿಸಿದ್ದು, ಇದರ ಸಾಮಾನ್ಯ ತಪಾಸಣೆ ನಡೆಸುವಾಗ ಕೆಲವೊಂದು ಚಿನ್ನದ ಆಭರಣಗಳು ನಾಪತ್ತೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡಿದ್ದ ಚಿನ್ನದ ಬದಲಾಗಿ ನಕಲಿ ಚಿನ್ನ ಮತ್ತು ಲೋಹದ ಗಟ್ಟಿಯನ್ನು ಅದರ ಸ್ಥಳದಲ್ಲಿಟ್ಟು, ಅಸಲಿ ಚಿನ್ನದ ಆಭರಣ ಮತ್ತು ಚಿನ್ನದ ಗಟ್ಟಿಗಳನ್ನು ಕಳವು ಮಾಡಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅಲ್ಲಿನ ಉದ್ಯೋಗಿಗಳೇ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನವನ್ನು ಬದಲಾಯಿಸಿರುವ ಶಂಕೆ  ವ್ಯಕ್ತವಾಗಿದೆ. 1989ರಲ್ಲಿ ಈ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಣೆಯಾಗಿರುವ ಚಿನ್ನದ ಮೊತ್ತ 27 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಎಂದಿರುವ ಅಧಿಕಾರಿಗಳು ಈ ಬಗ್ಗೆ ಜೂನ್ 15ರಂದೇ ಎಫ್​ಐಆರ್ ದಾಖಲಿಸಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿಶೇ.10 ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com