

ಅಹ್ಮದಾಬಾದ್: ಮುಸ್ಲಿಮರ ನಿರಂತರ ಹಿಂಸೆ ಹಾಗೂ ಜಗಳಕ್ಕೆ ಹೆದರಿ ಹಿಂದೂ ಕುಟುಂಬಗಳು ವಲಸೆ ಹೋಗುತ್ತಿದ್ದಾರೆಂಬ ವಿಚಾರ ಸತ್ಯವಾದರೆ ಉತ್ತರ ಪ್ರದೇಶ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲೇಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಕೈರಾನ ವಿಚಾರ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೆಲ ಸಮುದಾಯಗಳ ಬೆದರಿಕೆ ಹಾಗೂ ಹಿಂಸೆಗೆ ಹೆದರಿ ಉತ್ತರ ಪ್ರದೇಶದ ಕೈರಾನದಲ್ಲಿರುವ ಹಿಂದೂ ಕುಟುಂಬಗಳು ವಲಸೆ ಹೋಗುತ್ತಿದ್ದಾರೆಂದು ಬಿಜೆಪಿ ಶಾಸಕರೊಬ್ಬರು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಈ ಮಾಹಿತಿ ಸತ್ಯವಾದರೆ, ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕೈರಾನ ಘಟನೆಗೆ ಕೋಮುಬಣ್ಣವನ್ನು ನೀಡುವ ಪ್ರಯತ್ನಗಳನ್ನು ಮಾಡಬಾರದು. ಹಾಗೆಂದ ಮಾತ್ರಕ್ಕೆ ಹಿಂದೂಗಳು ತಾವು ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ವಲಸೆ ಹೋಗುವಂತಹ ಪರಿಸ್ಥಿತಿಗಳು ಎದುರಾಗಬಾರದು ಎಂದಿದ್ದಾರೆ.