ರಕ್ಷಣಾ, ಫಾರ್ಮಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಕೇಂದ್ರದ ಅನುಮತಿ

ಭಾರತ ಸರ್ಕಾರ ಎಫ್ ಡಿಐ ವಲಯದಲ್ಲಿನ ನಿಯಮಗಳಲ್ಲಿ ಸುಧಾರಣೆ ಜಾರಿಗೊಳಿಸಿದ್ದು, ನಾಗರಿಕ ವಿಮಾನಯಾನ, ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ
ಎಫ್ ಡಿ ಐ ನಿಯಮಗಳಲ್ಲಿ ಕೇಂದ್ರದಿಂದ ಭಾರಿ ಸುಧಾರಣೆ
ಎಫ್ ಡಿ ಐ ನಿಯಮಗಳಲ್ಲಿ ಕೇಂದ್ರದಿಂದ ಭಾರಿ ಸುಧಾರಣೆ

ನವದೆಹಲಿ: ಭಾರತ ಸರ್ಕಾರ ಎಫ್ ಡಿಐ ವಲಯದಲ್ಲಿನ ನಿಯಮಗಳಲ್ಲಿ ಸುಧಾರಣೆ ಜಾರಿಗೊಳಿಸಿದ್ದು, ನಾಗರಿಕ ವಿಮಾನಯಾನ,  ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ.

ಎಫ್ ಡಿಐ ನಿಯಮಗಳಲ್ಲಿ ಸುಧಾರಣೆಗಳು ಜಾರಿಯಾಗಿರುವುದರಿಂದಾಗಿ ಮೊಬೈಲ್/ ಗ್ಯಾಡ್ಜೆಟ್ ಉತ್ಪನ್ನ ತಯಾರಿಕೆಯ ವಿದೇಶಿ ಸಂಸ್ಥೆ ಆಪಲ್ ಹಾಗೂ ಪೀಠೋಪಕರಣ ತಯಾರಿಕೆಯ ಐಕೆಇಎ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಕಂಪನಿಗಳ ಉತ್ಪನ್ನಗಳು ಅತ್ಯಾಧುನಿಕವಾಗಿರುವ ಕಂಪನಿಗಳಿಗೆ ಅನ್ವಯಿಸುವಂತೆ, ಸ್ಥಳೀಯ ಪಾಲ್ಗೊಳ್ಳುವಿಕೆ ನಿಯಮಗಳನ್ನು ಭಾರತ ಸರ್ಕಾರ ಸಡಿಲಗೊಳಿಸಿದ್ದು, ಇದರಿಂದ ಆಪಲ್ ಸಂಸ್ಥೆ ಹೆಚ್ಚು ಅನುಕೂಲ ಪಡೆಯಲು ಸಾಧ್ಯವಾಗಲಿದೆ ಎಂದು ಭಾರತ ಸರ್ಕಾರದ ಕ್ರಮವನ್ನು ವಿಶ್ಲೇಷಿಸಲಾಗುತ್ತಿದೆ.

ಇನ್ನು ರಕ್ಷಣಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ.100 ಕ್ಕೆ ಏರಿಕೆ ಮಾಡಲಾಗಿದ್ದು  ವಿದೇಶಿ ಕಂಪನಿಗಳು ಭಾರತಕ್ಕೆ ರಕ್ಷಣಾ ತಂತ್ರಜ್ಞಾನ ವರ್ಗಾವಣೆ ಮಾಡಲು ಹಾಗೂ ಭಾರತದಲ್ಲಿ ಉದ್ಯಮವನ್ನು ಪ್ರಾರಂಭಿಸಲು ನೆರವಾಗಲಿದೆ. ರಕ್ಷಣಾ ಕ್ಷೇತ್ರದ ಮಾದರಿಯಲ್ಲೇ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ.100 ಕ್ಕೆ ಏರಿಕೆ ಮಾಡಲಾಗಿದ್ದು, ವಿದೇಶಿ ನೇರ ಬಂಅಡವಾಳ ಹೂಡಿಕೆಗೆ ಪೂರಕವಾಗುವ ಹೊಸ ನೀತಿಗಳನ್ನು ಇತ್ತೀಚೆಗಷ್ಟೇ ಜಾರಿಗೊಳಿಸಲಾಗಿತ್ತು. ಇನ್ನು ಔಷಧೀಯ ಕ್ಷೇತ್ರದಲ್ಲಿನ ವಿದೇಶಿ ನೇರವಂಡವಾಳ ಹೂಡಿಕೆಯನ್ನು ಶೇ.74 ಕ್ಕೆ ಏರಿಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com