ಯೋಗ: ಚೀನಾ ದಾಖಲೆ ಮುರಿಯುವತ್ತ ಭಾರತ

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ವಿಶ್ವವೇ ಸಾಕ್ಷಿಯಾಗಿದ್ದು, ಭಾರತದ ರಾಜ್ ಕೋಟ್ ನಲ್ಲಿ ಬರೊಬ್ಬರಿ 2 ಸಾವಿರಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಯೋಗ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣದತ್ತ ಸಾಗಿದ್ದಾರೆ.
ರಾಜ್ ಕೋಟ್ ನಲ್ಲಿ ಗರ್ಭಿಣಿ ಸ್ತ್ರೀಯರಿಂದ ದಾಖಲೆ ಯೋಗ (ಎಎನ್ ಐ ಚಿತ್ರ)
ರಾಜ್ ಕೋಟ್ ನಲ್ಲಿ ಗರ್ಭಿಣಿ ಸ್ತ್ರೀಯರಿಂದ ದಾಖಲೆ ಯೋಗ (ಎಎನ್ ಐ ಚಿತ್ರ)

ರಾಜ್ ಕೋಟ್: 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ವಿಶ್ವವೇ ಸಾಕ್ಷಿಯಾಗಿದ್ದು, ಭಾರತದ ರಾಜ್ ಕೋಟ್ ನಲ್ಲಿ ಬರೊಬ್ಬರಿ 2 ಸಾವಿರಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಯೋಗ  ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣದತ್ತ ಸಾಗಿದ್ದಾರೆ.

ಈ ಹಿಂದೆ ಚೀನಾದಲ್ಲಿ 940 ಮಂದಿ ಗರ್ಭಿಣಿ ಮಹಿಳೆಯರು ಏಕಕಾಲದಲ್ಲಿ ಯೋಗ ಮಾಡುವ ಮೂಲಕ ದಾಖಲೆ ಬರೆದಿದ್ದರು. ಆದರೆ ಈ ದಾಖಲೆ ಮುರಿಯುವ ಸಲುವಾಗಿಯೇ 2ನೇ  ಅಂತಾರಾಷ್ಟ್ರೀಯ ಯೋಗದಿನ ಕಾರ್ಯಕ್ರಮದಲ್ಲಿ ರಾಜ್ ಕೋಟ್ ನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಏಕಕಾಲದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

ಬೆಳಗ್ಗೆ ನಾಲ್ಕು ಗಂಟೆಯಿಂದಲೇ ರಾಜ್ ಕೋಟ್ ನ ಕಾಲವಾಡ್ ರಸ್ತೆಯಲ್ಲಿ ಸ್ವಾಮಿನಾರಾಯಣ ದೇಗುಲದ ಬೃಹತ್ ಹಾಲ್ ನಲ್ಲಿ ಸುಮಾರು 2, 500ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಯೋಗ  ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡುತ್ತಿದ್ದಾರೆ. ರಾಜ್ ಕೋಟ್ ಜಿಲ್ಲಾಡಳಿತ ಕರೆ ನೀಡಿದ್ದ ಯೋಗ ದಿನಾಚರಣೆಗೆ ಅಭೂಕಪೂರ್ವ ಪ್ರತಿಕ್ರಿಯೆ ಲಭಿಸಿದ್ದು, ಇದೇ  ಹುಮ್ಮಸ್ಸಿನಲ್ಲಿರುವ ರಾಜ್ ಕೋಟ್ ಜಿಲ್ಲಾಡಳಿತ ಯೋಗವನ್ನು ವಿಶ್ವಾದ್ಯಂತ ಖ್ಯಾತಿ ಗೊಳಿಸುವ ನಿಟ್ಟಿನಲ್ಲಿ  ಪ್ರತೀ ವರ್ಷ ಈ ಕಾರ್ಯವನ್ನು ಮುಂದುವರೆಸಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com