ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

ಮದರ್ ತೆರೆಸಾ ವಿರುದ್ಧ ಹೇಳಿಕೆ: ಯೋಗಿ ಆದಿತ್ಯನಾಥ್ ಬೆನ್ನಿಗೆ ನಿಂತ ಸುಬ್ರಮಣಿಯನ್ ಸ್ವಾಮಿ

ನೊಬೆಲ್ ಪುರಸ್ಕೃತೆ ಮದರ್ ತೆರೆಸಾ ವಿರುದ್ಧ ಹೇಳಿಕೆ ನೀಡಿ ತೀವ್ರ ವಿರೋಧಕ್ಕೆ ಕಾರಣರಾಗಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಬೆಂಬಲಕ್ಕೆ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್...
Published on

ನವದೆಹಲಿ: ನೊಬೆಲ್ ಪುರಸ್ಕೃತೆ ಮದರ್ ತೆರೆಸಾ ವಿರುದ್ಧ ಹೇಳಿಕೆ ನೀಡಿ ತೀವ್ರ ವಿರೋಧಕ್ಕೆ ಕಾರಣರಾಗಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಬೆಂಬಲಕ್ಕೆ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಬುಧವಾರ ಬಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಮದರ್ ತೆರಸಾ ಭಾರತವನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸುವ ಜಾಲದ ಒಂದು ಭಾಗವಾಗಿದ್ದರು. ಈಶಾನ್ಯ ರಾಜ್ಯಗಳಾದ ಅರುಣಾಚಲಪ್ರದೇಶ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಲ್ಲಿ ಮತಾಂತರದಿಂದ ಪ್ರತ್ಯೇಕತಾ ಚಳುವಳಿಗಳು ಪ್ರಾರಂಭವಾಗಿವೆ. ಭಾರತದ ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ, ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಯೋಗಿ ಆದಿತ್ಯನಾಥ್ ಅವರ ಬೆಂಬಲಕ್ಕೆ ನಿಂತಿರುವ ಸ್ವಾಮಿ ಅವರು, ಯೋಗಿ ಆದಿತ್ಯನಾಥ್ ಅವರು ವ್ಯಕ್ತಿಗತವಾಗಿ ಹೇಳಿಕೆ ನೀಡಿಲ್ಲ. ಈ ಬಗ್ಗೆ ಸಾಕಷ್ಟು ಪುಸ್ತಕಗಳು ಪ್ರಕಟಿಸಿವೆ ಎಂದು ಹೇಳಿದ್ದಾರೆ.

ಕ್ರಿಸ್ಟೋಫರ್ ಹಿಟ್ಚೆನ್ ಅವರು ಮದರ್ ತೆರೆಸಾ ಕುರಿತಂತೆ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಈ ಬಗೆಗಿನ ದಾಖಲೆಗಳು ಸಿಗುತ್ತದೆ. ಗೂಗಲ್ ನಲ್ಲಿ ಹುಡುಕಿದರೆ ಮದರ್ ತೆರೆಸಾ ಕುರಿತಂತೆ ಸಾಕಷ್ಟು ಪುಸ್ತಕಗಳು ಲಭ್ಯವಾಗುತ್ತದೆ ಎಂದಿದ್ದಾರೆ. ಅಲ್ಲದೆ, ಇದೇ ವೇಳೆ ಉದಾಹರಣೆಯೊಂದನ್ನು ನೀಡಿರುವ ಅವರು, ಕ್ಯಾಲಿಫೋರ್ನಿಯಾದಲ್ಲಿ ವಂಚಕನೊಬ್ಬ ಮಧ್ಯಮವರ್ಗದ ಜನರ ಪಿಂಚಣಿ ಹಣವನ್ನು ದರೋಡೆ ಮಾಡಿದ್ದ. ಈ ಬಗ್ಗೆ ತನಿಖೆ ನಡೆಯುತ್ತಿದ್ದ ವೇಳೆಯಲ್ಲಿ ಮದರ್ ತೆರೆಸಾ ಅವರು ಬರೆದಿರುವ ಪತ್ರವೊಂದು ಬಂದಿತ್ತು. ಪತ್ರದಲ್ಲಿ ದರೋಡೆಕೋರನಿಗೆ ದಂಡನೆ ನೀಡದಂತೆ ತಿಳಿಸಲಾಗಿತ್ತು.

ಒಬ್ಬ ದರೋಡೆಕೋರನ ಹಿಂದೆ ಮದರ್ ತೆರೆಸಾ ನಿಂತಿದ್ದನ್ನು ನೋಡಿ ನ್ಯಾಯಾಧೀಶರು ಆಶ್ಚರ್ಯ ವ್ಯಕ್ತಪಡಿಸಿದ್ದರು. ದರೋಡೆಕೋರನ ಹೆಸರು ಜೀಸಸ್ ಕ್ರೈಸ್ಟ್ ಆಗಿತ್ತು. ಪತ್ರದಲ್ಲಿ ದಂಡನೆ ನೀಡದಂತೆ ಕೋರಿದ್ದ ತೆರೆಸಾ ಅವರು, ದರೋಡೆಕೋರ ಹಣವನ್ನು ಹಿಂತಿರುಗಿಸುವಂತೆ ಸೂಚಿಸಿದ್ದರು. ಅಲ್ಲದೆ, ಆ ಹಣವನ್ನು ಸಂಕಷ್ಟದಲ್ಲಿರುವ ಜನರಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದ್ದರು. ಇದರಂತೆ ಆ ದರೋಡೆಕೋರ ಭಾರತದಲ್ಲಿ ಕ್ರೈಸ್ತೀಕರಣ ಸ್ಥಾಪಿಸಲು ಮದರ್ ತೆರೆಸಾಗೆ ಮಿಲಿಯನ್ ರಷ್ಟು ಡಾಲರ್ ಗಳನ್ನು ನೀಡಿದ್ದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com