ಅರವಿಂದ ಸುಬ್ರಮಣಿಯನ್ ದೇಶಭಕ್ತ ಎಂದು ಬಿಜೆಪಿ ಭಾವಿಸಿದರೆ ನನ್ನ ಬೇಡಿಕೆ ಅಮಾನತಿನಲ್ಲಿಡುತ್ತೇನೆ: ಸ್ವಾಮಿ

ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಮಣಿಯನ್ ಅವರನ್ನು ದೇಶಭಕ್ತ ಎಂದು ಪರಿಗಣಿಸುವುದಾದರೇ ಅವರನ್ನು ವಜಾಗೊಳಿಸುವ ತಮ್ಮ ಆಗ್ರಹವನ್ನು...
ಸುಬ್ರಮಣಿಯನ್ ಸ್ವಾಮಿ, ಅರವಿಂದ್ ಸುಬ್ರಮಣಿಯನ್ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಸುಬ್ರಮಣಿಯನ್ ಸ್ವಾಮಿ, ಅರವಿಂದ್ ಸುಬ್ರಮಣಿಯನ್ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ಆರ್ಥಿಕ ವ್ಯವಸ್ಥೆಯ ತೋಳನ್ನೇ ಚಿರುಚುವ ಪ್ರಯತ್ನದ ಹೊರತಾಗಿಯೂ ಬಿಜೆಪಿ ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಮಣಿಯನ್ ಅವರನ್ನು ದೇಶಭಕ್ತ ಎಂದು ಪರಿಗಣಿಸುವುದಾದರೇ ಅವರನ್ನು ವಜಾಗೊಳಿಸುವ ತಮ್ಮ ಆಗ್ರಹವನ್ನು ಅಮಾನತ್ತಿನಲ್ಲಿಡುವುದಾಗಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸ್ವಾಮಿ ಆಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿರುವ ಹೇಳಿಕೆ ಹಿನ್ನಲೆಯಲ್ಲಿ ಸ್ವಾಮಿ ಇಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಸ್ವಾಮಿ ಅವರ  ಆಗ್ರಹಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸರ್ಕಾರಕ್ಕೆ ಸಿಇಎ ಅವರ ಬಗ್ಗೆ ಪೂರ್ಣ ವಿಶ್ವಾಸ ಇದೆ. ಕಾಲ ಕಾಲಕ್ಕೆ ಅವರು ಸರ್ಕಾರಕ್ಕೆ ನೀಡಿದ  ಸಲಹೆಗಳು ಅತ್ಯಂತ ಮೌಲ್ಯಯುತವಾಗಿದ್ದವು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ‘ದೇಶಭಕ್ತನೆಂದು ಪರಿಗಣಿಸಲಾದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ವಿದೇಶವೊಂದಕ್ಕೆ ಭಾರತದ ತೋಳು ತಿರುಚಲು ಸಲಹೆ ಮಾಡಿದ್ದನ್ನು  ಕ್ಷಮಿಸಬೇಕೆಂದಾಗಿದ್ದಲ್ಲಿ ಮತ್ತು ಎಎಸ್ ರನ್ನು ದೇಶದ ಆಸ್ತಿ ಎಂದು ಪರಿಗಣಿಸುವುದಾರೆ ನಾನು ನನ್ನ ಬೇಡಿಕೆಯನ್ನು ಅಮಾನತುಗೊಳಿಸುತ್ತೇನೆ. ದಾಖಲೆಗಳು ಲಭ್ಯವಾಗುವವರೆಗೆ  ಕಾಯುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಸ್ವಾಮಿ, "ಎಎಸ್ (ಅರವಿಂದ ಸುಬ್ರಮಣಿಯನ್) ಅಮೆರಿಕ ಕಾಂಗ್ರೆಸ್​ಗೆ (ಹೇಳಿದ್ದು): ಭಾರತದ ಕಂಪೆನಿಗಳು ಮತ್ತು ರಫ್ತುದಾರರ ವಿರುದ್ಧ  ಅಮೆರಿಕದ ತಾರತಮ್ಯ ಉಪಕ್ರಮಗಳು ಮುಕ್ತರಾಷ್ಟ್ರವಾಗುವುದಕ್ಕೆ ಭಾರತದ ಮೇಲೆ ಒತ್ತಡ ನಿರ್ಮಿಸಬಲ್ಲವು’ ಎಎಸ್/13/3/13!’ ಎಂದು ಟ್ವೀಟ್​ನಲ್ಲಿ ಸಿಇಎ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com