
ರಾಯ್ಪುರ: ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಛತ್ತೀಸ್‌ಗಢ ಸರ್ಕಾರ ಇದೀಗ 12 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳಿಗೆ ರಾಜ್ಯದಲ್ಲಿ ನಿಷೇಧ ಹೇರಿದೆ.
ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ಛತ್ತೀಸ್ಗಢ ಪರಿಸರ ಸಂರಕ್ಷಣಾ ಮಂಡಳಿ ಅಧ್ಯಕ್ಷ ಅಮನ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಅಧಿಕಾರಿಗಳ ಸೂಚನೆಯಂತೆ 12 ವರ್ಷಕ್ಕಿಂತ ಮೇಲ್ಪಟ್ಟ ಹಳೆಯ ಬಸ್ ಗಳು, 10 ವರ್ಷಕ್ಕಿಂತ ಮೇಲ್ಪಟ್ಟ ಲಾರಿಗಳ ಮೇಲೆ ನಿಷೇಧ ಹೇರಲಾಗಿದೆ. ಅಲ್ಲದೆ, ನಿಷೇಧ ಹೇರಿದ ನಂತರ ಮಾಲೀಕರಿಗೆ ಹೊಸ ವಾಹನಗಳನ್ನು ಕೊಳ್ಳಲು 1 ವರ್ಷಗಳ ಕಾಲ ಕಾಲಾವಕಾಶಗಳನ್ನು ನೀಡಲಾಗುತ್ತದೆ. ಇತರೆ ರಾಜ್ಯಗಳಿಂದ ಬರುವ 8 ವರ್ಷಕ್ಕಿಂತ ಹಳೆ ವಾಹನಗಳಿಗೆ ರಾಜ್ಯದಲ್ಲಿ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ವಾಹನಗಳಿಗೆ ಅನುಮತಿಯನ್ನು ರಾಯ್ಬುರ, ದುರ್ಗ್, ಭಿಲ್ಲೈ ಮತ್ತು ಬಿಲಾಸ್ಪುರದಲ್ಲಿ ನೀಡಲಾಗುತ್ತದೆ. ರಾಜ್ಯದಲ್ಲಿ ಚಲಿಸುವ 10 ವರ್ಷಗಳಿಗಿಂತ ಹಳೆಯ ಆಟೋಗಳ ಮೇಲೂ ನಿಷೇಧವನ್ನು ಹೇರಲಾಗಿದೆ. ಆಟೋ ಮಾಲೀಕರಿಗೂ ಕೂಡ ಹೊಸ ಆಟೋ ಕೊಳ್ಳಲು 1 ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Advertisement