ಸಿಗರೇಟ್ ಗೆ ಹೊತ್ತಿಕೊಳ್ಳಬೇಕಿದ್ದ ಬೆಂಕಿಯ ಕಿಡಿ ಪೇಂಟರ್ ಪ್ರಾಣ ಬಲಿ ಪಡೆಯಿತು!

ಗ್ರಹಚಾರ ಕೆಟ್ಟರೆ ಸಣ್ಣ ಘಟನೆಗಳಿಂದಲೂ ಅಪಾಯ ಎದುರಾಗಬಹುದು ಎಂಬುದಕ್ಕೆ ಉದಾಹರಣೆ ಇಲ್ಲಿದೆ.
ಸಿಗರೇಟ್ ಹೊತ್ತಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!
ಸಿಗರೇಟ್ ಹೊತ್ತಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!

ಕೊಯಂಬತ್ತೂರು: ಗ್ರಹಚಾರ ಕೆಟ್ಟರೆ ಸಣ್ಣ ಘಟನೆಗಳಿಂದಲೂ ಅಪಾಯ ಎದುರಾಗಬಹುದು ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಕೊಯಂಬತ್ತೂರಿನ ಪೇಂಟರ್ ಒಬ್ಬ ಮೈಗೆ ಅಂಟಿದ್ದ ಪೇಂಟ್ ನ್ನು ತೆಗೆಯಲು ಕೆಮಿಕಲ್ ಲೇಪಿಸಿಕೊಂಡಿದ್ದಾನೆ. ಇದಾದ ಬಳಿಕ ಸಿಗರೇಟ್ ನ್ನು ಹೊತ್ತಿಸಿದ್ದಾನೆ ಅಷ್ಟೇ. ಸಿಗರೇಟ್ ಗೆ ಹೊತ್ತಿದೆ ಬೆಂಕಿ ಮೈಗೆ ವ್ಯಾಪಿಸಿ ಮೃತಪಟ್ಟಿದ್ದಾನೆ.

35 ವರ್ಷದ ವ್ಯಕ್ತಿ ಪೇಂಟಿಂಗ್ ಕೆಲಸ ಮುಕ್ತಾಯಗೊಳಿಸಿ ಮನೆಗೆ ಬಂದು, ಮೈಗೆ ಅಂಟಿದ್ದ ಪೇಂಟ್ ನ್ನು ತೆಗೆಯಲು ಕೈ, ಕಾಲುಗಳಿಗೆ ಥಿನ್ನರ್ ನ್ನು ಲೇಪಿಸಿಕೊಂಡಿದ್ದಾನೆ. ಇದಾದ ಬೆನ್ನಲ್ಲೇ ಸಿಗರೇಟ್ ನ್ನು ಹೊತ್ತಿಸಿಕೊಳ್ಳಲು ಬೆಂಕಿ ಹಚ್ಚಿದ್ದಾನೆ. ಸಿಗರೇಟ್ ನ್ನು ಹೊತ್ತಿಸಿಕೊಂಡ ಕಿಡಿ ಮೈಗೆ ತಗುಲಿದ ಪರಿಣಾಮ, ಬೆಂಕಿ ಕ್ಷಣಾರ್ಧದಲ್ಲಿ ಮೈಗೆ ವ್ಯಾಪಿಸಿದೆ. ಸಹಾಯಕ್ಕಾಗಿ ಮೊರೆಯಿಟ್ಟಿದ್ದನ್ನು ಕೇಳಿ ಸ್ಥಳೀಯರು ಬಂದು ಆಸ್ಪತ್ರೆಗೆ ಸೇರಿಸಿದರಾದರೂ  ತೀವ್ರವಾದ ಗಾಯಗಳಾಗಿದ್ದರಿಂದ ಆತ ಬದುಕಿಳಿಯಲಿಲ್ಲ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com