ಬ್ರಹ್ಮೋಸ್ ಹೊತ್ತ ಸುಖೋಯ್ ಯಶಸ್ವಿ ಹಾರಾಟ

ಭಾರತದ ರಕ್ಷಣಾ ವಲಯದ ಅತ್ಯಂತ ಪ್ರಬಲ ಕ್ಷಿಪಣಿ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ದೇಶೀ ನಿರ್ಮಿತ ಸುಖೋಯ್ ಯುದ್ಧ ವಿಮಾನಕ್ಕೆ ಅಳವಡಿಸಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು...
ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣಿ ಅಳವಡಿಕೆ
ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣಿ ಅಳವಡಿಕೆ
Updated on

ನವದೆಹಲಿ: ಭಾರತದ ರಕ್ಷಣಾ ವಲಯದ ಅತ್ಯಂತ ಪ್ರಬಲ ಕ್ಷಿಪಣಿ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ದೇಶೀ ನಿರ್ಮಿತ ಸುಖೋಯ್ ಯುದ್ಧ  ವಿಮಾನಕ್ಕೆ ಅಳವಡಿಸಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.

ತನ್ನ ವಿಭಾಗದಲ್ಲಿ ಅತೀ ಹೆಚ್ಚು ತೂಕದ ಕ್ಷಿಪಣೆಯಾಗಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಶನಿವಾರ ಸುಖೋಯ್ 30 ಎ೦ಕೆಐ ಯುದ್ಧ ವಿಮಾನಕ್ಕೆ ಅಳವಡಿಸಿ ಪರೀಕ್ಷೆ ನಡೆಸಲಾಯಿತು. ನಾಸಿಕ್‍ನ  ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 2500 ಕೆ.ಜಿ. ಭಾರದ ಬ್ರಹ್ಮೋಸ್ ಕ್ಷಿಪಣಿ ಹೊತ್ತು ಸುಖೋಯ್ 30 ಎ೦ಕೆಐ ಯುದ್ಧ ವಿಮಾನವು ಸುಮಾರು 45  ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿತು. ವಿ೦ಗ್ ಕಮಾ೦ಡರ್ ಪ್ರಶಾ೦ತ್ ನಾಯರ್ ಮತ್ತು ವಿ೦ಗ್ ಕಮಾ೦ಡರ್ ಎ೦.ಎಸ್.ರಾಜು ಸುಖೋಯ್ ಯುದ್ಧ ವಿಮಾನವನ್ನು 45  ನಿಮಿಷಗಳ ಕಾಲ ಹಾರಾಟ ನಡೆಸಿ, ಎಲ್ಲಾ ಪರೀಕ್ಷೆಗಳನ್ನೂ ಯಶಸ್ವಿಯಾಗಿಸಿದರು.

ಕ್ಷಿಪಣಿ ಅಸಲಿಯಲ್ಲದೇ ಇದ್ದರೂ ಬ್ರಹ್ಮೋಸ್ ಅಸಲೀ ಕ್ಷಿಪಣಿ ಇರುವಷ್ಟೇ ತೂಕವನ್ನು ಈ ನಕಲಿ ಕ್ಷಿಪಣಿ ಹೊಂದಿತ್ತು. ಹೀಗಾಗಿ ಸುಖೋಯ್ ವಿಮಾನ ಅಸಲಿ ಕ್ಷಿಪಣಿ ಹೊರುವ ಸಾಮರ್ಥ್ಯ  ಹೊಂದಿದೆ ಎಂಬ ವಿಚಾರವನ್ನು ವಿಜ್ಞಾನಿಗಳು ಈ ಮೂಲಕ ದೃಢಪಡಿಸಿಕೊಂಡರು.

ವಿಮಾನಕ್ಕೆ ಕೊಂಚ ಬದಲಾವಣೆ

ಇನ್ನು ಇಷ್ಟು ಭಾರಿ ಗಾತ್ರದ ಕ್ಷಿಪಣಿ ಹೊರುವ ಸಲುವಾಗಿಯೇ ಸುಖೋಯ್ ವಿಮಾನದಲ್ಲಿ ತಾಂತ್ರಿಕ ಬದಲಾವಣೆ ಮಾಡಲಾಗಿತ್ತು. ವಿಮಾನದಲ್ಲಿರುವ ಕ್ಷಿಪಣಿ ವ್ಯವಸ್ಥೆಗೆ ಕೊಂಚ ಬದಲಾವಣೆ  ತಂದು ಅದಕ್ಕೆ ಬ್ರಹ್ಮೋಸ್ ಕ್ಷಿಪಣಿಯನ್ನು ಅಳವಡಿಸಲಾಯಿತು. ಆ ಮೂಲಕ ಇಡೀ ವಿಶ್ವದಲ್ಲೇ ಈ ಮಾದರಿ ವಿಮಾನದಲ್ಲಿ ಸುಮಾರು 2.5 ಟನ್ ತೂಕದ ಕ್ಷಿಪಣಿ ಅಳವಡಿಸಿದ ಖ್ಯಾತಿ ಭಾರತದ  ಪಾಲಾಯಿತು. ಅಲ್ಲದ ಇದೀಗ ಸುಖೋಯ್ ಯುದ್ಧ ವಿಮಾನ ಲೀಥಲ್ ವೆಪನ್ ಡೆಲಿವೆರಿ ಪ್ಲಾಟ್ ಫಾರ್ಮ್ ಹೊಂದಿದ ವಿಮಾನಗಳ ಶ್ರೇಣಿಗೆ ಸೇರಿತು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ನಿರ್ಮಿಸುತ್ತಿರುವ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಒ ಸುಧೀರ್ ಕುಮಾರ್ ಮಿಶ್ರಾ ಅವರು, ಸುಖೋಯ್  ವಿಮಾನದ ಮಾದರಿಯ ಯುದ್ಧ ವಿಮಾನಕ್ಕೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ತೂಕದ ಕ್ಷಿಪಣಿ ಅಳವಡಿಕೆ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ  ಹೆಎಚ್ ಎಲ್ ನ ಸಿಎಂಡಿ ಟಿ ಸುವರ್ಣ ರಾಜು ಅವರು ಮಾತನಾಡಿ, ಪ್ರಸ್ತುತ 2 ವಿಮಾನಗಳ ಇಂಜಿನ್ ನಲ್ಲಿ ಬದಲಾವಣೆ ತಂದು ಕ್ಷಿಪಣಿ ಅಳವಡಿಸಲಾಗಿದೆ. ಅಂತೆಯೇ ಅಕ್ಟೋಬರ್ ಅಥವಾ  ನವೆಂಬರ್ ನಲ್ಲಿ ಸುಖೋಯ್ ಯುದ್ಧ ವಿಮಾನ ಮೂಲಕ ಕ್ಷಿಪಣಿಯನ್ನು ಉಡಾಯಿಸುವ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ 40 ಸುಖೋಯ್ 30 ಎ೦ಕೆಐ ಯುದ್ಧ ವಿಮಾನಗಳಿಗೆ  ಎಚ್‍ಎಎಲ್‍ನಲ್ಲಿ ಕ್ಷಿಪಣಿ ಅಳವಡಿಸಲು ಅಗತ್ಯ ಮಾಪಾ೯ಡು ಮಾಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com