ನೌಕಾದಳದ ಸಾಮರ್ಥ್ಯ ಹೆಚ್ಚಳಕ್ಕಾಗಿ ಅಮೆರಿಕದ ಎಂ 777 ಫಿರಂಗಿ ಖರೀದಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ರಕ್ಷಣಾ ಇಲಾಖೆ ಅಮೆರಿಕ ನಿರ್ಮಿತ ಎಂ 777 ಹಾವಿಟ್ಜರ್ ಫಿರಂಗಿಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಹಾವಿಟ್ಜರ್ ಎಂ777 ಫಿರಂಗಿ (ಸಂಗ್ರಹ ಚಿತ್ರ)
ಹಾವಿಟ್ಜರ್ ಎಂ777 ಫಿರಂಗಿ (ಸಂಗ್ರಹ ಚಿತ್ರ)

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ರಕ್ಷಣಾ ಇಲಾಖೆ ಅಮೆರಿಕ ನಿರ್ಮಿತ ಎಂ 777 ಹಾವಿಟ್ಜರ್ ಫಿರಂಗಿಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬೋಫೋಸ್‍೯ ಹಗರಣ ಬೆಳಕಿಗೆ ಬ೦ದ 30 ವಷ೯ಗಳ ಬಳಿಕ ಭಾರತ ಸರ್ಕಾರ ವಿದೇಶದಿಂದ ಫಿರಂಗಿಗಳ ಖರೀದಿಗೆ ಮುಂದಾಗಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು  ಅಧ್ಯಕ್ಷರಾಗಿರುವ ರಕ್ಷಣಾ ಖರೀದಿ ಮಂಡಳಿ (Defence Acquisition Council-DAC) ಸಭೆ ನಡೆಸಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು  ತಿಳಿದುಬಂದಿದೆ. ಸಭೆಯಲ್ಲಿ 28 ಸಾವಿರ ಕೋಟಿ ರು. ಮೂಲ್ಯದ ಒಟ್ಟು 19 ಪ್ರಸ್ತಾಪಗಳ ರಕ್ಷಣಾ ಉಪಕರಣಗಳ ಖರೀದಿ ಬಗ್ಗೆ ಚಚೆ೯ ನಡೆಯಿತು ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಭಾರತೀಯ ಭೂ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆ ಈ ನಿರ್ಣಯ ಕೈಗೊಂಡಿದ್ದು, ಸುಮಾರು 750 ದಶಲಕ್ಷ ಡಾಲರ್ ವೆಚ್ಚದಲ್ಲಿ 145 ಎಂ  777 ಫಿರಂಗಿಗಳನ್ನು ಖರೀದಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ. 155 ಎ೦ಎ೦ನ 45 ಎ೦777 ಹಾವಿಟ್ಜರ್  ಫಿರ೦ಗಿಗಳು ಅತ್ಯ೦ತ ಹಗುರವಾಗಿದ್ದು, ಸುಮಾರು 4 ಟನ್ ತೂಕ ಹೊ೦ದಿವೆ. ಈ ಫಿರ೦ಗಿಗಳು 25 ಕಿ.ಮೀ. ದೂರದ ಗುರಿಯನ್ನು ಮುಟ್ಟುವ ಸಾಮಥ್ಯ೯ ಹೊ೦ದಿವೆ.

ಇದರೊಂದಿಗೆ ಭೋಫೋರ್ಸ್ ಸುಧಾರಿತ ಆವೃತ್ತಿ ಧನುಶ್ ಆಟಿ೯ಲರಿ ಗನ್‍ಗಳ ನಿಮಾ೯ಣಕ್ಕೂ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಭಾರತೀಯ ನೌಕಾಪಡೆಗೆ 13,600 ಕೋಟಿ ರು.  ವೆಚ್ಚದಲ್ಲಿ 6 ಕ್ಷಿಪಣಿ ವಾಹಕ ನೌಕೆಗಳ ನಿಮಾ೯ಣಕ್ಕೆ ಟೆ೦ಡರ್ ಆಹ್ವಾನಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜೂನ್ ಅಂತ್ಯದಲ್ಲಿ ಸೇನೆಗೆ 3 ಧನುಷ್ ಆರ್ಟಿಲರಿ ಗನ್ ಗಳ ಸೇರ್ಪಡೆ
ಇದೇ ವೇಳೆ ಧನುಷ್ ಆರ್ಟಿಲರಿ ಗನ್ ಗಳ ಕಾರ್ಯವನ್ನು ಪರೀಶಿಲಿಸಲಾಗಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಭಾರತೀಯೇ ಸೇನೆಗೆ 3 ಧನುಷ್ ಆರ್ಟಿಲರಿ ಗನ್ ಗಳನ್ನು ಮತ್ತು ಸೆಪ್ಟೆಂಬರ್  ತಿಂಗಳಲ್ಲಿ ಮತ್ತೆ ಮೂರು ಗನ್ ಗಳನ್ನು ಸೇರ್ಪಡೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ ಮುಂದಿನ ವರ್ಷದ ಆರಂಬದ ಹೊತ್ತಿಗೆ ಸೇನೆ ಒಟ್ಟು 18 ಧನುಷ್ ಆರ್ಟಿಲರಿ ಗನ್ ಗಳ  ಸೇರ್ಪಡೆಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com