ಸ್ವಾಮಿ ವೇಯ್ಟರ್ ಹೇಳಿಕೆ ಶೋಚನೀಯವಾದದ್ದು: ರಾಬರ್ಟ್ ವಾದ್ರಾ

ಸೂಟು ಹಾಗೂ ಟೈ ಹಾಕುವವರು ವೇಯ್ಟರ್ ಗಳಂತೆ ಕಾಣುತ್ತಾರೆಂಬ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ಹೇಳಿಕೆ ವಿರುದ್ಧ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ...
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ನವದೆಹಲಿ: ಸೂಟು ಹಾಗೂ ಟೈ ಹಾಕುವವರು ವೇಯ್ಟರ್ ಗಳಂತೆ ಕಾಣುತ್ತಾರೆಂಬ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ಹೇಳಿಕೆ ವಿರುದ್ಧ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ಕಿಡಿಕಾರಿದ್ದು, ಸ್ವಾಮಿ ಹೇಳಿಕೆ ಶೋಚನೀಯ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ಪ್ರತಿಕ್ರಿಯೆ ನೀಡಿರುವ ಅವರು, ಸೂಟು ಹಾಗೂ ಟೈ ಹಾಕಿದವರು ವೇಯ್ಟರ್ಸ್ ಗಳಂತೆ ಕಾಣುತ್ತಾರೆಂದು ಸ್ವಾಮಿ ಅವರು ಹೇಳಿದ್ದಾರೆ, ವೇಯ್ಟರ್ ಗಳಿಗೆ ಘನತೆ ಇಲ್ಲವೇ? ಇತರರ ಗಮನವನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಸ್ವಾಮಿ ಇದೀಗ ಶ್ರಮಪಟ್ಟು ದುಡಿಯುವ ವೇಯ್ಟರ್ ಗಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಸುಬ್ರಮಣಿಯನ್ ಹೇಳಿಕೆ ಶೋಚನೀಯವಾದದ್ದು ಎಂದು ಹೇಳಿದ್ದಾರೆ.

ರಾಬರ್ಟ್ ವಾದ್ರಾ ಅವರ ಈ ಹೇಳಿಕೆಗೆ ಟ್ವಿಟರ್ ನಲ್ಲೇ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿಯವರು, ರಾಬರ್ಟ್ ವಾದ್ರಾ ಅವರು ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬದಲು ಜೈಲಿನಿಂದ ಹೊರಗುಳಿಯುವುದು ಹೇಗೆ ಎಂಬುದರ ಬಗ್ಗೆ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.

ವಾದ್ರಾ ವಿರುದ್ಧ ಈ ಹಿಂದೆಯೂ ಸ್ವಾಮಿ ಅವರು ಗುಡುಗಿದ್ದರು. ವಾದ್ರಾ ಭ್ರಷ್ಟಾಚಾರದಿಂದ ಸಾಕಷ್ಟು ಹಣವನ್ನು ಮಾಡಿದ್ದಾರೆ. ವಾದ್ರಾ ಶಾಲೆಗೆ ಹೂಡಾ (ಹರಿಯಾಣ ಮುಖ್ಯಮಂತ್ರಿ ಭುಪೇಂದರ್ ಸಿಂಗ್ ಹೂಡಾ) ಅವರು ಮುಖ್ಯಸ್ಥರಾಗಿದ್ದಾರೆ, ವಾದ್ರಾಗೆ ಹೂಡಾ ಅವರು ಮುಖ್ಯಮಂತ್ರಿಗಳು. ಆದರೂ ಅವರು ಸೇವಕನಂತೆ ವರ್ತಿಸುತ್ತಿದ್ದಾರೆ. ಹೂಡಾ ಅವರು ರಾಬರ್ಟ್ ಗೆ ಎಲ್ಲವನ್ನೂ ಮಾಡಿಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಕೊಡಿಸಿದ್ದಾರೆ. ಆ ಭೂಮಿಯನ್ನು ಇನ್ನಿತರೆ ಕಂಪನಿಗಳಿಗೆ ರಾಬರ್ಟ್ ವಾದ್ರಾ ಮಾರಾಟ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com