ಬೇಟಿ ಬಚಾವೋ, ಬೇಟಿ ಪಡಾವೋ ವಾಕ್ಯ ನನ್ನದು, ಕೇಂದ್ರ ಸರ್ಕಾರ ಅದನ್ನು ಕದ್ದಿದೆ: ಪೊಲೀಸ್ ಅಧಿಕಾರಿ

ಬಾಲಕಿಯರ ರಕ್ಷಣೆ ಮತ್ತು ಶಿಕ್ಷಣ ಆಂದೋಲನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಘೊಷಿಸಿದ ಭೇಟಿ ಬಚಾವೋ, ಭೇಟಿ ಪಡಾವೋ ಯೊಜನೆಯ ಮೂಲ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉದಯಪುರ: ಬಾಲಕಿಯರ ರಕ್ಷಣೆ ಮತ್ತು ಶಿಕ್ಷಣ ಆಂದೋಲನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಘೊಷಿಸಿದ  ಬೇಟಿ  ಬಚಾವೋ, ಬೇಟಿ ಪಡಾವೋ ಯೊಜನೆಯ ಮೂಲ ಘೊಷವಾಕ್ಯ ನನ್ನ ಪರಿಕಲ್ಪನೆ, ಅದನ್ನು ಕೇಂದ್ರ ಸರ್ಕಾರ ಕದ್ದಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಇತಿಹಾಸ ಮತ್ತು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ರಾಜಸ್ಥಾನದ ಉಯದಪುರದ ಚೇತನಾ, ಪೊಲೀಸ್ ಇಲಾಖೆಗೆ ಸೇರುವ ಮೊದಲು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲೇ ಬರೆದ ಕವಿತೆಯೊಂದರಲ್ಲಿ ಈ ಸಾಲುಗಳನ್ನು ಮೂಡಿಸಿದ್ದೆ. 2005ರಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲೂ ಅದನ್ನು ವಾಚಿಸಿದ್ದೆ.

ನರೇಂದ್ರ ಮೋದಿ  ಅವರು ಇದನ್ನು ರಾಷ್ಟ್ರೀಯ ಆಂದೋಲನಕ್ಕೆ ಬಳಸಿದ್ದಾರೆ. ಭಾರತದ ಆಯ್ದ ರಾಜ್ಯಗಳ 100ಕ್ಕೂ ಹೆಚ್ಚು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನನ್ನ ಘೊಷವಾಕ್ಯ ಮೊಳಗುತ್ತಿದೆ. ನನ್ನ ರಚನೆಯನ್ನು ಅನುಮತಿ ಇಲ್ಲದೆ ಬಳಸಿದ್ದರ ಬಗ್ಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಪ್ರಧಾನಿ ಕಚೇರಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಇದನ್ನು ರಾಷ್ಟ್ರೀಯ ಯೋಜನೆಗೆ ಬಳಸಿದ್ದರ ಬಗ್ಗೆ ನನ್ನ ಆಕ್ಷೇಪವಾಗಲೀ, ಇದರಿಂದ ಆರ್ಥಿಕ ಅಪೇಕ್ಷೆಯಾಗಲೀ ಇಲ್ಲ. ಇದು ನನ್ನ ರಚನೆ ಎಂಬುದನ್ನೂ ಅಧಿಕೃತವಾಗಿ ಎಲ್ಲರಿಗೂ ತಿಳಿಯಬೇಕು ಎಂಬುದಷ್ಟೇ ನನ್ನ ಆಗ್ರಹ  ಎಂದು ಚೇತನಾ ತಿಳಿಸಿದ್ದಾರೆ.

ಹೆಣ್ಣ ಭ್ರೂಣ ಹತ್ಯೆಯಂತ ಘಟನೆಗಳನ್ನು ತಡೆಯಲು ಈ ಘೋಷ ವಾಕ್ಯ ಹಾಕಿಕೊಂಡು ಆಂದೋಲನ ನಡೆಸಲು ನಾನು 2002 ರಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಮನವಿ ಮಾಡಿದ್ದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಾನು ಸುಮ್ಮನಿದ್ಗೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com